ಮನೋರಂಜನೆ

ರಕ್ತಚಂದನ ಕಳ್ಳಸಾಗಣೆ ದಂಧೆಯಲ್ಲಿ ಗಗನ ಸಖಿ !

Pinterest LinkedIn Tumblr

sangeeta

ತಿರುಪತಿ: ಗಂಧ, ರಕ್ತ ಚಂದನ ಕಳ್ಳಸಾಗಣೆ ದಂಧೆ ನಡೆಸುತ್ತಿರುವ ಗ್ಯಾಂಗ್ ನ್ನು ಪತ್ತೆ ಹಚ್ಚಲು ಬೆನ್ನಟ್ಟಿದ್ದ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು, ದಂಧೆಯಲ್ಲಿ ಭಾಗಿಯಾಗಿದ್ದ ಗಗನ ಸಖಿ.

ರಕ್ತ ಚಂದನ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗಗನ ಸಖಿ ಸಂಗೀತ ಚಟರ್ಜಿಯನ್ನು ಚಿತ್ತೂರು ಪೋಲೀಸರು ಬಂಧಿಸಿದ್ದರು. ಆದರೆ, ಕೂಡಲೇ ಸ್ಥಳೀಯ ನ್ಯಾಯಾಲಯದಿಂದ ಆಕೆಗೆ ಜಾಮೀನು ದೊರಕಿದೆ.

ರಕ್ತ ಚಂದನ ಕಳ್ಳಸಾಗಣೆ ಮಾಡುತ್ತಿದ್ದವರ ಪತ್ತೆಗಾಗಿ ಚಿತ್ತೂರಿನ ಡಿಎಸ್ ಪಿ ಗಿರಿಧರ್ ಮತ್ತು ಚಿತ್ತೂರ್ ಪಶ್ಚಿಮ ಸಿಐ ಆದಿನಾರಾಯಣ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ರಕ್ತ ಚಂದನ ಕಳ್ಳಸಾಗಣೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಗಗನಸಖಿ ಸಂಗೀತ ಚರ್ಟರ್ಜಿ ಭಾಗಿಯಾಗಿರುವುದು ತಿಳಿದು ಬಂದಿದೆ. ಈ ಕುರಿತು ಆಳವಾದ ತನಿಖೆ ನಡೆಸಿದಾಗ, ಸಂಗೀತ ಕುಖ್ಯಾತ ಸ್ಮಗ್ಲರ್ ಲಕ್ಷ್ಮಣ್ ನ ಎರಡನೇ ಪತ್ನಿ ಎಂದು ತಿಳಿದು ಬಂದಿದೆ.

ಸಂಗೀತ ಅಂತರಾಷ್ಟ್ರೀಯ ಏರ್ ಲೈನ್ ನಲ್ಲಿ ಉದ್ಯೋಗ ಮಾಡುತ್ತಿದ್ದು, ಪತಿ ಲಕ್ಷ್ಮಣ್ ಕಳ್ಳಸಾಗಣೆ ದಂಧೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಳು. ಕೊಲ್ಕತಾದ ನ್ಯೂ ಗಾರಿಯಾದಲ್ಲಿ ವಾಸವಾಗಿರುವ ಸಂಗೀತ, ದಂಧೆಯ ಹಣದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ರೂಪದರ್ಶಿಯಾಗಬೇಕೆಂಬ ಆಸೆ ಹೊಂದಿದ್ದ ಸಂಗೀತ ಖಾತೆಗೆ ಕೋಟಿಗಟ್ಟಲೇ ಹಣ ಬಂದು ಬೀಳುತ್ತಿತ್ತು. ಚೀನಾ ಮತ್ತು ಮಲೇಷಿಯಾದಿಂದ ಈ ಹಣ ವರ್ಗಾವಣೆಯಾಗುತ್ತಿತ್ತು. ಕಳೆದ ಐದು ವರ್ಷದಿಂದ ಲಕ್ಷ್ಮಣ್ ಮತ್ತು ಸಂಗೀತ ಖಾತೆಗೆ ಚೀನಾ ಮತ್ತು ಮಲೇಷಿಯಾದಿಂದ ಹಣ ಡೆಪಾಸಿಟ್ ಆಗುತ್ತಿದೆ. ಈ ಸಂಬಂಧ ಪೊಲೀಸರು ಆರು ಪಾಸ್ ಬುಕ್, ಎರಡು ಬ್ಯಾಂಕ್ ಖಾತೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಡೆಲ್ ಒಬ್ಬಳು ಆ ದಂಧೆಯಲ್ಲಿ ಭಾಗಿಯಾಗಿರುವುದು ಇದೇ ಮೊದಲಲ್ಲ. ಈ ಮೊದಲು ನಟಿ ನೀತು ಅಗರ್ವಾಲ್ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿತ್ತು.

Write A Comment