ಕರ್ನಾಟಕ

ಕಲಬುರ್ಗಿಯಲ್ಲಿ ಬಸವಣ್ಣ ಪ್ರತಿಮೆಗೆ ಹಾನಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ

Pinterest LinkedIn Tumblr

strike

ಕಲಬುರ್ಗಿ: ಕಲಬುರ್ಗಿಯಲ್ಲಿರುವ ಬಸವಣ್ಣನ ಪ್ರತಿಮೆ ಮೇಲೆ ಕಿಡಿಗೇಡಿಗಳು ಹಾನಿ ಉಂಟು ಮಾಡಿದ ಹಿನ್ನಲೆಯಲ್ಲಿ ಕೆಲ ಸಂಘಟನೆಗಳು ಕೈಗೊಂಡಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

ಮಂಗಳವಾರ ರಾತ್ರಿ ಕಲಬುರ್ಗಿಯ ಅಫ್ಜಲ್ ಪುರ್ ತಾಲ್ಲೂಕಿನ ಅಲ್ಲಗಿ ಹಳ್ಳಿಯಲ್ಲಿದ್ದ ಬಸವಣ್ಣ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಇದನ್ನು ವಿರೋಧಿಸಿ ಕೆಲ ಸಂಘಟನೆಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಟೈರ್ ಗಳನ್ನು ಸುಟ್ಟು ಹಾಕಿ, ಆಟೋ ರಿಕ್ಷಾದವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಇನ್ನು ಸ್ಥಳೀಯರು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಮೆ ಮುಂದೆ ಧರಣಿ ನಡೆಸಿದರು. ಅಫ್ಜಲ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಖಿಲ ಭಾರತ ಲೀಂಗಾಯತ ವೀರಶೈವ ಮಹಾಸಭಾ, ಬಸವ ಜಯಂತಿ ಉತ್ಸವ ಸಮಿತಿ ಮತ್ತು ಬಸವ ಪ್ರತಿಷ್ಠಾನ ಸೇರಿದಂತೆ ಇತರೆ ಸಂಘಗಳು ಜಂಟಿಯಾಗಿ ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿವೆ. ಪ್ರಕರಣ ಕುರಿತು ತನಿಖೆಯನ್ನು ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿವೆ.

Write A Comment