ಕನ್ನಡ ವಾರ್ತೆಗಳು

ಶ್ರೀ ಕ್ಷೇತ್ರಕದ್ರಿಯಲ್ಲಿ ಪರ್ಜನ್ಯಜಪ, ರುದ್ರ ಪಾರಾಯಣ

Pinterest LinkedIn Tumblr

kadri_rain_pooja_1

ಮಂಗಳೂರು,ಮೇ.12: ಅಖಿಲ ಭಾರತ ಬ್ರಾಹ್ಮಣ‌ ಒಕ್ಕೂಟದ ವತಿಯಿಂದ‌ ಗುರುವಾರ ‌ಉಷಾಕಾಲದಲ್ಲಿ ಶ್ರೀಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ, ಶ್ರೀ ಸೂಕ್ತ ಹಾಗೂ ವಿಷ್ಣು ಸಹಸ್ರನಾಮವನ್ನು ಸಾಮೂಹಿಕವಾಗಿ ಪಠಿಸಲಾಯ್ತು. ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ನೇತೃತ್ವದಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಅರ್ಚಕರುಗಳಾದ ವಿಠಲದಾಸ ತಂತ್ರಿ, ರಾಮ‌ ಅಡಿಗ, ರಾಮಕೃಷ್ಣ ಭಟ್ ಉಪಸ್ಥಿತರಿದ್ದರು.

ಸಾಮೂಹಿಕ ಪ್ರಾರ್ಥನೆಯ ಬಳಿಕ ಸುಮಾರು‌ ಎರಡೂವರೆ ಗಂಟೆಗಳ ಕಾಲ ಪರ್ಜನ್ಯಜಪ, ರುದ್ರ ಪಾರಾಯಣ ಹಾಗೂ ಇತರ ನಾಮಾರ್ಚನೆಗಳನ್ನು ಮಾಡಲಾಯ್ತು.

kadri_rain_pooja_2 kadri_rain_pooja_3 kadri_rain_pooja_4kadri_rain_pooja_5 kadri_rain_pooja_6 kadri_rain_pooja_7 kadri_rain_pooja_8 kadri_rain_pooja_9

ಸಮತಾ ಬಳಗ, ಸುಬ್ರಹ್ಮಣ್ಯ ಸಭಾ, ಕೂಟ ಮಹಾಜಗತ್ತು, ಹವ್ಯಕ ಸಭಾ, ಲ್ಯಾಂಡ್‌ಲಿಂಕ್ಸ್‌ನ ವಿಪ್ರಸಮೂಹ, ಇತ್ಯಾದಿ ಸಂಘಟನೆಗಳ ಪ್ರತಿನಿಧಿಗಳಲ್ಲದೆ ನಾರಾಯಣ ಕಂಜರ್ಪಣೆ, ನಿತ್ಯಾನಂದ ಕಾರಂತ ಪೊಳಲಿ ಕೆ. ಎಸ್. ಕಲ್ಲುರಾಯ, ಸುಧಾಕರ ರಾವ್ ಪೇಜಾವರ, ಪೂರ್ಣಿಮಾರಾವ್ ಪೇಜಾವರ, ದಿನೇಶ್‌ ದೇವಾಡಿಗ, ಮೋಹನ ಕೊಪ್ಪಲ, ಅರುಣ್‌ಕುಮಾರ್ ಮೊದಲಾದವರು ಪಾಲ್ಗೊಂಡಿದ್ದರು.

Write A Comment