ಕನ್ನಡ ವಾರ್ತೆಗಳು

ಕೆರೆ ಅಭಿವೃದ್ಧಿ ಕೋರಿ ಸಲ್ಲಿಸಿದ್ದ ವರದಿಯನ್ನು ಕೇಂದ್ರದ ಅಧಿಕಾರಿಗಳು ತಿರಸ್ಕಾರ

Pinterest LinkedIn Tumblr

bellandur_found_pic

ಬೆಂಗಳೂರು,ಮೇ.14  ಬೆಳ್ಳಂದೂರು ಕೆರೆ ಇದುವರೆಗೂ ಅಭಿವೃದ್ಧಿಯಾಗಿಲ್ಲ. ಕೆರೆಯ ಅಭಿವೃದ್ಧಿಗೆಂದು ಬಿಡಿಎ ಅಧಿಕಾರಿಗಳು, ಜಲಮಂಡಳಿ ಅಧಿಕಾರಿಗಳು, ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ 559 ಕೋಟಿ ರೂಪಾಯಿ ನೆರವು ಕೇಳಿದ್ರು. ಆದ್ರೆ ಕೇಂದ್ರದ ಅಧಿಕಾರಿಗಳು ಯೋಜನಾ ವರದಿಯನ್ನೇ ವಾಪಸ್ ಕಳುಹಿಸಿದೆ.
ಕೇಂದ್ರ ಇಲಾಖೆ ಹೇಳಿದ್ದೇನು?

ಬಿಡಿಎ ಮತ್ತು ಜಲಮಂಡಳಿ ಅಧಿಕಾರಿಗಳು ಕಳುಹಿಸಿರುವ ವರದಿ ಆರು ವರ್ಷ ಹಳೆಯದ್ದು. ಇದರಲ್ಲಿ ಸದ್ಯದ ಕೆರೆ ಪರಿಸ್ಥಿತಿ ಬಗ್ಗೆ ಮಾಹಿತಿಯೇ ಇಲ್ಲ. ನೊರೆ ಗಂಭೀರತೆ ಬಗ್ಗೆ ಉಲ್ಲೇಖ ಮಾಡಿಲ್ಲ. ಅಧಿಕಾರಿಗಳು ತಯಾರು ಮಾಡಿರುವ ವರದಿಗೆ ಕರ್ನಾಟಕ ಕೆರೆ ಸಂರಕ್ಷಣಾ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಯನ್ನೇ ಪಡೆದಿಲ್ಲ. ಅಲ್ಲದೇ ಯೋಜನಾ ವರದಿಯಲ್ಲಿನ ಅಂಶಗಳು ಯೋಗ್ಯವಾಗಿಲ್ಲ. ಹೀಗಾಗಿ ಹಣಕಾಸಿನ ನೆರವು ನೀಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರದಿಂದಲೇ ನೆರವು ಪಡೆದುಕೊಳ್ಳಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಬಿಡಿಎ ಅಧಿಕಾರಿಗಳನ್ನ ಕೇಳಿದ್ರೆ, ಹೌದು ಕೇಂದ್ರ ಯೋಜನಾ ವರದಿಯನ್ನ ವಾಪಸ್ ಕಳುಹಿಸಿದ್ದಾರೆ. ಆದ್ರೆ ನಾವು ಕೆರೆಯನ್ನ ಅಭಿವೃದ್ಧಿ ಮಾಡೇ ಮಾಡ್ತೀವಿ ಎಂದು ಹೇಳುತ್ತಾರೆ. ಆದ್ರೆ ಅಧಿಕಾರಿಗಳು ಕೆರೆ ಅಭಿವೃದ್ದಿ ಹೇಗೆ ಮಾಡುತ್ತಾರೆಂದು ನೋಡ್ಬೇಕು.

Write A Comment