ಕನ್ನಡ ವಾರ್ತೆಗಳು

ಉರ್ವ ಹೊಗೆಬೈಲ್: ಉಚಿತ ನೇತ್ರಚಿಕಿತ್ಸಾ ಶಿಬಿರ.

Pinterest LinkedIn Tumblr

urva_eye_camp

ಮಂಗಳೂರು,ಮೇ.17 : ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವು ಕಲ್ಪಿಸುವ ಸದುದ್ದೇಶದಿಂದ ಯುವ ಸಂಘಟನೆಯು‌ ಉಚಿತ ನೇತ್ರಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯವಾಗಿದೆ ‌ಎಂದು ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ನೇತ್ರಚಿಕಿತ್ಸಾ ತಜ್ಞೆ ಡಾ|ಮಧುರಿಮಾ ನಾಯಕ್‌ ಅವರು ಹೇಳಿದರು.

ಮಂಗಳೂರಿನ ಉರ್ವ ಹೊಗೆಬೈಲಿನ ಜೈಭಾರತಿ ತರುಣ ವೃಂದ ಹಾಗೂ ಜೈಭಾರತಿ ಮಹಿಳಾ ವೃಂದದ ವತಿಯಿಂದ ಮಂಗಳೂರಿನ ಅತ್ತಾವರ ಕೆ‌ಎಂಸಿ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉರ್ವ ಬಳಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಮೇ .15 ರಂದು ಆಯೋಜಿಸಲಾದ ಉಚಿತ ನೇತ್ರ ತಪಾಸಣೆ, ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ‌ ಅತಿಥಿಯಾಗಿ ಪಾಲ್ಗೊಂಡಖ್ಯಾತ ನೇತ್ರ ತಜ್ಞ ಡಾ|ರತ್ನಾಕರ್ ಟಿ. ಹಾಗೂ ಕೆ‌ಎಂಸಿ ಆಸ್ಪತ್ರೆಯ ಶಿಬಿರ ಸಂಯೋಜಕ ಲವಿನ್ ಎನ್.ಎ.ಅವರು ಶುಭ ಹಾರೈಸಿದರು. ಜೈಭಾರತಿ ತರುಣ ವೃಂದದಗೌರವ‌ ಅಧ್ಯಕ್ಷ ನಾಗೇಶ್‌ ದೇವಾಡಿಗ, ಅಧ್ಯಕ್ಷ ಸದಾಶಿವ ಶೆಟ್ಟಿ, ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ರಾಜೇಶ್ ಸಾಲ್ಯಾನ್, ಜೈಭಾರತಿ ಮಹಿಳಾ ವೃಂದದ‌ ಅಧ್ಯಕ್ಷೆ ಸವಿತಾ ವರದರಾಜ್ ಹಾಗೂ ಕಾರ್ಯದರ್ಶಿ ನೀತಾ‌ಎಸ್.ಶೆಟ್ಟಿ ಉಪಸ್ಥಿತರಿದ್ದರು.

ಜೈಭಾರತಿ ತರುಣ ವೃಂದದ ನಿಕಟಪೂರ್ವ ಅಧ್ಯಕ್ಷ ಸತೀಶ್ ಪೂಜಾರಿ‌ ಅಶೋಕನಗರ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ನರೇಂದ್ರ‌ ಅಂಚನ್ ವಂದಿಸಿದರು. ಸತೀಶ್ ಶೆಟ್ಟಿ ಕೊಡಿಯಾಲ್‌ಬೈಲ್ ಕಾರ್ಯಕ್ರಮ ನಿರ್ವಹಿಸಿದರು.

ಒಟ್ಟು192 ಮಂದಿಗೆ ಶಿಬಿರದಲ್ಲಿ ನೇತ್ರತಪಾಸಣೆ ನಡೆಸಲಾಯಿತು.

Write A Comment