ಚಿನ್ನದ ಮೇಲೆ ಯಾರಿಗೆ ತಾನೇ ಮೋಹವಿರುವುದಿಲ್ಲ ಹೇಳಿ. ಹಳದಿ ಲೋಹದ ಮೇಲೆ ಜನರಿಗೆ ಅತಿಯಾದ ಪ್ರೀತಿ ಇದ್ದು ಚಿನ್ನದ ಒಡವೆಗಳನ್ನು ಧರಿಸುವುದೆಂದರೆ ಅವರಿಗೆ ಎಲ್ಲಿಲ್ಲದ ಸಂತಸವಾಗಿರುತ್ತದೆ. ಮೈತುಂಬಾ ಚಿನ್ನ ಹೇರಿಕೊಂಡು ತಮ್ಮ ಆಡಂಬರದ ಪ್ರದರ್ಶನವನ್ನು ಮಾಡುವ ಜನರಿದ್ದು ಚಿನ್ನ ಕದ್ದುಹೋಗುತ್ತದೆಂಬ ಭಯವಿದ್ದರೂ ಪ್ರಾಣ ಹೋದರೂ ಚಿನ್ನ ಬಿಡೆನು ಎಂಬ ತತ್ವವನ್ನು ಇವರು ಅನುಸರಿಸುತ್ತಾರೆ.
ಚಿನ್ನದ ಮೇಲಿನ ವ್ಯಾಮೋಹ ಕೆಲವರಿಗೆ ಹೇಗಿರುತ್ತದೆಂದರೆ ಇವರುಗಳು ಪ್ರತಿಯೊಂದನ್ನು ಚಿನ್ನದಲ್ಲೇ ತಯಾರಿಸುವ ಖಯಾಲಿಯನ್ನು ಹೊಂದಿರುತ್ತಾರೆ. ಚಿನ್ನದ ಟಾಯ್ಲೆಟ್, ಚಿನ್ನದ ಹಾಸುಗೆ, ಚಿನ್ನದ ಶರ್ಟ್, ಹೀಗೆ ಪ್ರತಿಯೊಂದನ್ನೂ ಚಿನ್ನದಲ್ಲೇ ತಯಾರಿಸಿಕೊಳ್ಳುವ ಹಂಬಲವನ್ನಿಟ್ಟುಕೊಂಡಿರುತ್ತಾರೆ. ಬಂಗಾರ ಪ್ರಿಯರೇ, ತಿಳಿದಿರಲಿ ಚಿನ್ನದಂತಹ ಸಂಗತಿ…
ಬಾಲ್ಯದಲ್ಲಿ ಓದಿದ ಕಥೆ ನಿಮಗೆ ನೆನಪಿರಬಹುದು, ಒಬ್ಬ ರಾಜನಿಗೆ ತಾನು ಮುಟ್ಟಿದ್ದೆಲ್ಲಾ ಚಿನ್ನವಾಗಬೇಕೆಂಬ ಹುಚ್ಚು ಅಂತೆಯೇ ದೇವರಲ್ಲಿ ಈ ಬಗೆಯಾಗಿ ವರವನ್ನೂ ಕೇಳುತ್ತಾನೆ. ಆತ ಏನೇ ಸ್ಪರ್ಶಿಸಲಿ ಎಲ್ಲವೂ ಚಿನ್ನವಾಗುತ್ತದೆ ಕೊನೆಗೆ ಆತ ಊಟ ಮಾಡುವ ಅನ್ನ ಕೂಡ ಚಿನ್ನವಾಗಿ ಮಾರ್ಪಡುತ್ತದೆ. ಕೊನೆಗೆ ತನ್ನ ಮುದ್ದಿನ ಮಗಳೂ ಕೂಡ ಚಿನ್ನದ ಪುತ್ಥಳಿಯಾಗಿ ಮಾರ್ಪಟ್ಟಾಗ ಮಾತ್ರ ಆ ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ.
ಇದೇ ರೀತಿಯಾಗಿ ಇಂದಿನ ಕಾಲದಲ್ಲೂ ಸರ್ವವನ್ನೂ ಚಿನ್ನಮಯವಾಗಿಸುವ ಆಸೆ ಅವರದಾಗಿರುತ್ತದೆ. ಹಾಗಿದ್ದರೆ ಚಿನ್ನದ ವ್ಯಾಮೋಹವುಳ್ಳವರ ಆಸಕ್ತಿಯನ್ನು ಅವರು ಯಾವ ರೀತಿಯಲ್ಲಿ ಪ್ರದರ್ಶಿಸಿದ್ದಾರೆ ಎಂಬುದನ್ನು ಕೆಳಗಿನ ಸ್ಲೈಡರ್ಗಳಲ್ಲಿ ತೋರಿಸಲಿದ್ದೇವೆ, ಮುಂದೆ ಓದಿ…
ನಾವು ವಿಚಿತ್ರ ಶವಪೆಟ್ಟಿಗೆಯನ್ನು ಕೇಳಿದ್ದರೂ ನೋಡಿದ್ದರೂ ಚಿನ್ನದ ಶವಪೆಟ್ಟಿಗೆ ಅತಿ ವಿಚಿತ್ರವಾಗಿರುವಂತಹದ್ದಾಗಿದೆ. ಚಿನ್ನದ ಶವಪೆಟ್ಟಿಗೆಯಲ್ಲಿ ತಮ್ಮನ್ನು ಹೂಳಬೇಕೆಂಬುದು ಕೆಲವರ ಬಯಕೆಯಾಗಿರುತ್ತದೆ.
ತಾವು ನುಂಗುವ ಮಾತ್ರೆಯನ್ನು ಕೂಡ ಚಿನ್ನದ ಗುಳಿಗೆಗಳನ್ನಾಗಿ ಮಾರ್ಪಡಿಸುವ ಬಯಕೆ ಉಳ್ಳ ವಿಚಿತ್ರ ಮನುಷ್ಯರು ಇದ್ದಾರೆ ಎಂಬುದನ್ನು ನೀವು ನಂಬಲೇಬೇಕು.
ತಣ್ಣಗಿನ ಕಾಫಿಯನ್ನು ಚಿನ್ನದ ಸ್ಟ್ರಾದಲ್ಲಿ ಹೀರುವ ಆ ಅದ್ಭುತ ನಿಮಿಷವನ್ನು ಯಾರು ತಾನೇ ಬಯಸುವುದಿಲ್ಲ ಹೇಳಿ. ನಿಜಕ್ಕೂ ಇದೊಂದು ಆಡಂಬರದ ವಿಷಯವಾಗಿದೆ.
ಈ ಚಿನ್ನದ ಬಾರ್ಬೆಕ್ಯೂ ಗ್ರಿಲ್ ಬೆಲೆ $165,000 ಆಗಿದೆ. ಈ ಯಂತ್ರದ ಪ್ರತಿಯೊಂದು ಭಾಗವನ್ನೂ 24 ಕ್ಯಾರೆಟ್ ಚಿನ್ನವನ್ನು ಬಳಸಿ ತಯಾರಿಸಲಾಗಿದೆ.
ನಿಮಗೆಲ್ಲಿಯಾದರೂ ಈ ಚಿನ್ನದ ಗಾಲ್ಫ್ನಿಂದ ಆಟವಾಡುವ ಅದೃಷ್ಟ ದೊರಕಿದರೆ ನೀವೇನು ಮಾಡುವಿರಿ? ಈ ಬಾಲ್ನ ಅಂದವನ್ನು ನೋಡುತ್ತಾ ನಿಂತುಬಿಡುವುದು ಖಂಡಿತ
ಈ ರೋಲಿಂಗ್ ಪೇಪರ್ ಅನ್ನು 24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದ್ದು ನಿಜಕ್ಕೂ ಇದೊಂದು ಕ್ರೇಜಿ ಅನುಭಭವಾಗಿದೆ ಅಲ್ಲವೇ?
22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾದ ಟಾಯ್ಲೆಟ್ ಪೇಪರ್ ಇದಾಗಿದೆ. ಜನರಿಗೆ ಚಿನ್ನದ ಮೇಲೆ ಎಷ್ಟೊಂದು ಹುಚ್ಚಿದೆ ಎಂಬುದನ್ನು ಇದನ್ನು ನೋಡಿಯೇ ನಿಮಗೆ ಪರಿಗಣಿಸಬಹುದಾಗಿದೆ.
ಹಾಲಿವುಡ್ ನಿರ್ದೇಶಕರು ಈ ಚಿನ್ನದ ಶೂಗಳನ್ನು ನಟ ಮೈಕೆಲ್ ಜೋರ್ಡನ್ಗೆ ಉಡುಗೊರೆಯಾಗಿ ನೀಡಿದ್ದು, ಆಸ್ಕರ್ನ ಟ್ರೋಫಿಗೆ ಸರಿಹೊಂದುವಂತಹ ಉಡುಗೊರೆಯನ್ನು ಅವರು ನೀಡಿದ್ದಾರೆ. ನಟನ ನಟನೆಗೆ ದೊರೆತ ಮೆಚ್ಚುಗೆಯಾಗಿದೆ ಈ ಚಿನ್ನದ ಶೂ ಕಾಣಿಕೆ
Comments are closed.