ಅಂತರಾಷ್ಟ್ರೀಯ

ಅಮೆರಿಕಾ ಅಧ್ಯಕ್ಷ ಪದವಿಯಿಂದ ನಿರ್ಗಮಿಸಲಿರುವ ಬರಾಕ್ ಒಬಾಮಾಗೆ ನೌಕರಿ ನೀಡ್ತಾರಂತೆ ದುಬೈ ವಕೀಲ!

Pinterest LinkedIn Tumblr

President Barack Obama speaks about his signature health care law, Thursday, Nov. 14, 2013, in the Brady Press Briefing Room of the White House in Washington. Bowing to pressure, President Barack Obama intends to permit continued sale of individual insurance plans that have been canceled because they failed to meet coverage standards under the health care law, officials said Thursday. (AP Photo/Charles Dharapak)

ದುಬೈ: ಅಮೆರಿಕಾ ಅಧ್ಯಕ್ಷ ಪದವಿಯಿಂದ ನಿರ್ಗಮಿಸಲಿರುವ ಬರಾಕ್‌ ಒಬಾಮಗೆ ದುಬೈಯ ವಕೀಲರೊಬ್ಬರು ನೌಕರಿ ನೀಡುವುದಾಗಿ ಆಹ್ವಾನ ನೀಡಿದ್ದಾರೆ.

ಶ್ವೇತ ಭವನದಿಂದ ನಿರ್ಗಮಿಸಿದ ಬಳಿಕ ಒಬಾಮ ನನ್ನ ಆಫೀಸಿನಲ್ಲಿ ನೌಕರಿಗೆ ಸೇರುವುದಾದರೆ ವಿಮಾನ ಟಿಕೆಟ್‌ನ ಹಣ ನೀಡಲು ಕೂಡ ತಯಾರಿದ್ದೇನೆ ಎಂದು ವಕೀಲ ಐಸಾಬಿನ್‌ ಹೈದರ್‌ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.

ಇಸ್ಲಾಮ್‌ ಧರ್ಮದಲ್ಲಿ ಸಹಿಷ್ಣುತೆ ಎಂದರೇನೆಂದು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಒಬಾಮಗೆ ಈ ಆಫ‌ರ್‌ ನೀಡಿರುವುದಾಗಿ ಅವರು ಟ್ವೀಟ್‌ ಮಾಡಿದ್ದಾರೆ.

ಅರಬ್ ದೇಶಕ್ಕೆ ಬಂದು ಇಲ್ಲಿನ ಜನರ ಜತೆಗೆ ಬೆರೆತರೆ ಮಾತ್ರ ಇಸ್ಲಾಮ್‌ ಎಷ್ಟು ಸಹಿಷ್ಣು ಧರ್ಮ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು. ಅಮೆರಿಕ ಮತ್ತು ಪಾಶ್ಚಾತ್ಯ ಮಾಧ್ಯಮಗಳು ನಿರಂತರವಾಗಿ ಇಸ್ಲಾಮನ್ನು ಉಗ್ರರ ಧರ್ಮ ಮತ್ತು ಮುಸ್ಲಿಮರನ್ನು ಉಗ್ರರೆಂದು ವರ್ಗೀಕರಿಸಿ ತಪ್ಪು ಗ್ರಹಿಕೆ ಸೃಷ್ಟಿಸಿವೆ. ಇದು ಸುಳ್ಳು ಎಂದು ಸಾಬೀತುಪಡಿಸಲು ಒಬಾಮಾ ಅವರನ್ನು ಆಹ್ವಾನಿಸಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Comments are closed.