ಮುಂಬಯಿ: ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ತಮ್ಮ ಒಂಟಿ ಜೀವನಕ್ಕೆ ಗುಡ್ ಬೈ ಹೇಳೋ ಕಾಲ ಸನಿಹವಾಗಿದೆ.
ತಮ್ಮ ಗರ್ಲ್ ಫ್ರೆಂಡ್ ಲುಲಿಯಾ ವಂತೂರು ಜೊತೆ ಶೀಘ್ರವೇ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 27 ರಂದು ಸಲ್ಮಾನ್ ಖಾನ್ ವಿವಾಹ ನಡೆಸಲು ಸಲ್ಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 27ರಂದು 51ನೇ ವರ್ಷಕ್ಕೆ ಕಾಲಿಡುತ್ತಿರುವ ಸಲ್ಮಾನ್ ಖಾನ್ ಅಂದೇ ವಿವಾಹ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ಸಲ್ಲು ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಅಂದು ಡಬಲ್ ಖುಷಿ ಸಿಗಲಿದೆ.
Comments are closed.