ಕನ್ನಡ ವಾರ್ತೆಗಳು

ಪಶ್ಚಿಮ ವಲಯ ಐಜಿಪಿ ಹಾಗೂ ದ.ಕ.ಜಿಲ್ಲಾ ಎಸ್ಪಿಯವರಿಗೆ ಬೀಳ್ಕೊಡುಗೆ.

Pinterest LinkedIn Tumblr

IGP_sendoff_photo_1

ಮಂಗಳೂರು.ಮೆ.23:  ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಅಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿಂದ ವರ್ಗಾವಣೆಗೊಂಡ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮೃತ್ ಪಾಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್.ಡಿ.ಶರಣಪ್ಪ ಇವರಿಗೆ ಬೀಳ್ಕೊಡುಗೆ ಸಮಾರಂಭ ರವಿವಾರ ನಗರದಲ್ಲಿ ನಡೆಯಿತು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ಪೊಲೀಸ್ ಕಮೀಶನರ್ ಚಂದ್ರಶೇಖರ್,ಎಸ್.ಪಿ.ಶರಣಪ್ಪ ಅವರು ಪೊಲೀಸ್ ಇಲಾಖೆಯ ಬಗ್ಗೆ ಸಾಕಷ್ಟು ಅನುಭವ ಮತ್ತು ಮಾಹಿತಿ ಹೊಂದಿದ್ದ ವ್ಯಕ್ತಿಯಾಗಿದ್ದರು.ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಉತ್ತಮ ಪೊಲೀಸ್ ಅಧಿಕಾರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

IGP_sendoff_photo_2 IGP_sendoff_photo_3 IGP_sendoff_photo_4 IGP_sendoff_photo_5 IGP_sendoff_photo_6 IGP_sendoff_photo_7 IGP_sendoff_photo_8 IGP_sendoff_photo_9 IGP_sendoff_photo_10 IGP_sendoff_photo_11 IGP_sendoff_photo_12 IGP_sendoff_photo_13 IGP_sendoff_photo_14 IGP_sendoff_photo_15

ಪಶ್ಚಿಮ ವಲಯ ಐಜಿಪಿ ಅಮೃತ್‌ಪಾಲ್ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.ಅಪರಾಧ ನಡೆಯದಂತೆ ತಡೆಯುವುದು ಪೊಲೀಸರ ಪ್ರಮುಖ ಕೆಲಸ ,ಕೆಲವೊಮ್ಮೆ ಸಮಾಜದಲ್ಲಿ ಅಪರಾಧ ನಡೆದರೆ ಅದನ್ನು ಪತ್ತೆ ಹಚ್ಚುವಿದೆ ಪೊಲೀಸ್ ಇಲಾಖೆಯ ಪ್ರಮುಖ ಕೆಲಸ ಈ ನಿಟ್ಟಿನಲ್ಲಿ ನಾವು ಕಾರ್ಯಕ್ಷಮತೆಯನ್ನು ತೋರಿಸುವುದು ಮುಖ್ಯ ಎಂದು ಹೇಳಿದ ಅವರು, ತಮಗೆ ಸಹಕಾರ ನೀಡಿದ ಪೊಲೀಸ್ ಇಲಾಖೆಯ ಹಾಗೂ ಇತರ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಅವಧಿ ತೃಪ್ತಿ ತಂದಿದೆ.ಹಲವು ಸವಾಲುಗಳನ್ನು ಎದುರಿಸಬೇಕಾಗಿತ್ತು.ಸಾರ್ವಜನಿಕರ ಹಾಗೂ ಇಲಾಖೆಯ ಅಧಿಕಾರಿಗಳ ಮತ್ತು ಮೇಲಧಿಕಾರಿಗಳ ಸಹಾಯದಿಂದ ಅವುಗಳನ್ನು ನಿಭಾಯಿಸಲು ಸಾಧ್ಯವಾಯಿತು.ರಾಜ್ಯ ಸರಕಾರವು ನ್ಯಾಯಾಲಯದಲ್ಲಿ ಪ್ರಕರಣದಾಖಲಿಸಲು ಕಾನೂನು ಬದ್ಧವಾದ ಸಹಕಾರವನ್ನು ನೀಡಿರುವುದು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ನಡೆದ ಘಟನೆಯಾಗಿದೆ ಎಂದು ಎಸ್‌ಪಿ ಶರಣಪ್ಪ ತಿಳಿಸಿದರು.

ಸಮಾರಂಭವನ್ನುದ್ದೇಶಿಸಿ ಉಡುಪಿ ಜಿಲ್ಲಾ ಎಸ್.ಪಿ ಅಣ್ಣಾಮಲೈ ಮಾತನಾಡುತ್ತಾ ,ಐಜಿಪಿ ಅಮೃತ್‌ಪಾಲ್ ಬಹುಮುಖಿ ಜ್ಞಾನವನ್ನು ಹೊಂದಿದ್ದ ಅನುಭವಿ ಪೊಲೀಸ್ ಅಧಿಕಾರಿಯಾಗಿದ್ದರು.ಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ,ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನ್ಸೆಂಟ್ ಶಾಂತ ಕುಮಾರ್,ಪುತ್ತೂರು ಎಎಸ್‌ಪಿ ,ಕಾರ್ಕಳ ಎಎಸ್‌ಪಿ,ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ,ನಿವೃತ್ತ ಎಸ್.ಪಿ ಹರಿಶ್ಚಂದ್ರ,ಡಾ.ಮಹಾಬಲ ಶೆಟ್ಟಿ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಶುಭಕೋರಿದರು.ಐಜಿಪಿ ಅಮೃತ್‌ಪಾಲ್‌ರ ಪತ್ನಿ ಮಂಜುಳಾ ಅಮೃತ್‌ಪಾಲ್, ಡಾ.ಎಸ್.ಪಿ.ಶರಣಪ್ಪರ ಪತ್ನಿ ಶಾಲಿನಿ ಮುಂತಾದವರು ಉಪಸ್ಥಿತರಿದ್ದರು.

Comments are closed.