ಕರ್ನಾಟಕ

17 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ ಉಪೇಂದ್ರ-ಪ್ರೇಮ !

Pinterest LinkedIn Tumblr

uppi-prema

ಬೆಂಗಳೂರು: ‘ಕಲ್ಪನಾ-2’, ‘ಮುಕುಂದ ಮುರಾರಿ’ ಸಿನೆಮಾಗಳ ನಂತರ ನಟ-ನಿರ್ದೇಶಕ ಉಪೇಂದ್ರ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಶೀರ್ಷಿಕೆ ಎಂದಿನಂತೆ ವಿಚಿತ್ರವಾಗಿದೆ. ‘ಉಪೇಂದ್ರ ಮತ್ತೆ ಹುಟ್ಟಿ ಬಾ, ಇಂತಿ ಪ್ರೇಮ’ ಎಂಬ ಉದ್ದದ ಹೆಸರಿನ ಈ ಚಿತ್ರ ತೆಲುಗು ಸಿನೆಮಾ ‘ಸೊಗ್ಗದೆ ಚಿನ್ನಿ ನಯನ’ದಿಂದ ಸ್ಫೂರ್ತಿ ಪಡೆದಿದೆಯಂತೆ. ಕನ್ನಡದಕ್ಕೆ ಕಥೆ ಉಪೇಂದ್ರ ಅವರೇ ಬರೆದಿದ್ದು, ಅರುಣ್ ಲೋಕನಾಥ್ ನಿರ್ದೇಶನದ ಜವಾಬ್ದಾರಿ ಹೊರಲಿದ್ದಾರೆ. ಈ ಹಿಂದ ಪ್ರಿಯಾಂಕಾ, ಪ್ರಭುದೇವ ಮತ್ತು ಉಪೇಂದ್ರ ನಟನೆಯ ಎಚ್2ಒ ಸಿನೆಮಾ ಕೂಡ ಇವರೇ ನಿರ್ದೇಶಿಸಿದ್ದರು.

‘ಉಪೇಂದ್ರ ಮತ್ತೆ ಹುಟ್ಟಿ ಬಾ.. ‘ ಸಿನೆಮಾದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಪ್ರೇಮಾ ಮೊದಲ ಬಾರಿಗೆ ಉಪೇಂದ್ರ ನಿರ್ದೇಶನದ ‘ಓಂ’ ಸಿನೆಮಾದಲ್ಲಿ ನಟಿಸಿದ್ದರು. ನಂತರ ‘ಉಪೇಂದ್ರ’ ಸಿನೆಮಾದಲ್ಲೂ ಕೂಡ ಉಪೇಂದ್ರ ಜೊತೆಗೆ ನಟಿಸಿದ್ದರು. 2009ರಲ್ಲಿ ‘ಶಿಶಿರ’ ಸಿನೆಮಾದ ನಂತರ ನಟನೆಯಿಂದ ದೂರ ಉಳಿದಿದ್ದರು.

“17 ವರ್ಷಗಳ ನಂತರ ಉಪೇಂದ್ರ ಜೊತೆಗೆ ಒಟ್ಟಿಗೆ ನಟಿಸಲಿದ್ದಾರೆ ಪ್ರೇಮ” ಎಂದು ಮೂಲಗಳು ತಿಳಿಸಿವೆ. ಉಪೇಂದ್ರ ಅವರ ಕೆಲಸಗಳನ್ನು ನಿರ್ವಹಿಸುವ ಶ್ರೀರಾಮ್ ಈ ಸಿನೆಮಾದ ನಿರ್ಮಾಪಕರಂತೆ. ಎಲ್ಲವೂ ಸುಸೂತ್ರವಾಗಿ ನೆರವೇರಿದರೆ ಜೂನ್ ಎರಡನೇ ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.

ಸದ್ಯಕ್ಕೆ ನಂದ ಕಿಶೋರ್ ನಿರ್ದೇಶನದ ‘ಮುಕುಂದ ಮುರಾರಿ’ ಸಿನೆಮಾದ ಚಿತ್ರಿಕರಣದ ಮುಕ್ತಾಯ ಹಂತದಲ್ಲಿ ಉಪೇಂದ್ರ ಭಾಗಿಯಾಗಿದ್ದು, ಅನಂತ ರಾಜು ನಿರ್ದೇಶನದ ‘ಕಲ್ಪನಾ-೨’ ಸಿನೆಮಾದ ಹಾಡಿನ ಚಿತ್ರೀಕರಣದಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.

Comments are closed.