ಕರ್ನಾಟಕ

ಕುಡಿದು ಬಂದ ಭಕ್ತ; ​ತಪ್ಪಾಯ್ತು ಎಂದ ಮೇಲೆ ವಾಪಸ್ ಹೋದ ನಾಗರಹಾವು!

Pinterest LinkedIn Tumblr

Snakeಕಲಬುರಗಿ:ನೆಲದೊಳಗೆ ಶಿವಲಿಂಗ ದೊರೆಯುವ ಮೂಲಕ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಅಫ್ಜಲಪುರದ ಗೌರ್ ಕೆ ಗ್ರಾಮದಲ್ಲಿ ಮತ್ತೊಂದು ಪವಾಡ ನಡೆದಿದೆ…ಕುಡಿದು ಶಿವಲಿಂಗ ದರ್ಶನ ಮಾಡಲು ಬಂದಿದ್ದ ಭಕ್ತನ ಕಾರಿನೊಳಗೆ ನಾಗರಹಾವು ಕಾಣಿಸಿಕೊಂಡ ಘಟನೆ ನಡೆದಿದೆ.

ಗೌರ್ ಕೆ ಗ್ರಾಮದಲ್ಲಿನ ಶಿವಲಿಂಗ ದರ್ಶನ ಮಾಡಲು ಬೊಲೆರೋ ಕಾರಿನಲ್ಲಿ ಭಕ್ತರೊಬ್ಬರು ಬಂದಿದ್ದರು. ವಾಪಸ್ ತೆರಳುವ ಸಂದರ್ಭದಲ್ಲಿ ಕಾರಿನೊಳಗೆ ನಾಗರಹಾವು ಇದ್ದಿರುವುದು ಗಮನಕ್ಕೆ ಬಂದಿದೆ. ನಾಗರಹಾವನ್ನು ಹೊರಹಾಕಲು ಗ್ರಾಮಸ್ಥರು ಹರಸಾಹಸ ಪಟ್ಟಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಕೊನೆಗೆ ಶಿವಲಿಂಗ ದರ್ಶನ ಮಾಡಲು ಬಂದಾತ ಕುಡಿದು ಬಂದಿದ್ದು, ಅದಕ್ಕೆ ದೇವರಿಗೆ ಕೋಪ ಬಂದಿದ್ದು, ನಾಗರಹಾವು ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಂತೂ ಕೊನೆಗೆ ಭಕ್ತ ನನ್ನದು ತಪ್ಪಾಯ್ತು ಎಂದು ಕೈಮುಗಿದು ಬೇಡಿಕೊಂಡ ಬಳಿಕ ಹಾವು ಕಾರಿನಿಂದ ಹೊರಗೆ ಹೋಗಿರುವುದಾಗಿ ಸ್ಥಳೀಯರು ವಿವರಿಸಿದ್ದಾರೆ.
-ಉದಯವಾಣಿ

Comments are closed.