ನ್ಯೂಯಾರ್ಕ್, ಜೂ.01: ನ್ಯೂಯಾರ್ಕ್’ನ ಪೆನ್ ಸ್ಟೇಟ್’ನ ಲೈಂಗಿಕ ತಜ್ಞರಾದ ಚೆಲೋಮ್ ಎ ಲೇವಿಟ್ ಪ್ರಕಾರ ಚೊಚ್ಚಲ ಮಗುವಾದ ಮಹಿಳೆಯರು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳದಿದ್ದರೆ ಪತಿಯೊಂದಿಗೆ ಮುಂದಿನ ಅವರ ಸೆಕ್ಸ್ ಜೀವನಕ್ಕೆ ಆಪತ್ತು ಸಂಭವಿಸುತ್ತದೆ. ಲೇವಿಟ್ ಅವರು ದೀರ್ಘವಾಗಿ ಹಾಗೂ ಸೂಕ್ಷ್ಮವಾಗಿ ಸಂಶೋಧನೆ ನಡೆಸಿ ,ಮೊದಲ ಮಗುವಾದ ಮಹಿಳೆಯರು ಹೆಚ್ಚು ಒತ್ತಡಕ್ಕೊಳಗಾಗಿರುತ್ತಾರೆ, ಅಲ್ಲದೆ ಈ ಸಂದರ್ಭದಲ್ಲಿ ತಾಯಿಯರ ಆರೈಕೆ ಬಹಳ ಮುಖ್ಯ. ಎಂದು ಹೇಳಿದ್ದಾರೆ.
ತಾಯಿಯರು ತಮ್ಮ ಮಗಳು ಹಾಗೂ ಮೊಮ್ಮಕ್ಕಳನ್ನು ಸರಿಯಾಗಿ ಪೋಷಿಸಬೇಕು. ಇಲ್ಲದಿದ್ದರೆ ಮೊದಲ ಮಗುವಾದ ನಂತರ ದಾಂಪತ್ಯ ಸುಖದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ’ ಎಂದು ತಮ್ಮ ‘ಸೆಕ್ಸ್ ರೋಲ್’ ಎಂಬ ಜರ್ನಲ್’ನಲ್ಲಿ ವಿಷಯಗಳನ್ನು ಮಂಡಿಸಿದ್ದಾರೆ.
ಆರೈಕೆಯಲ್ಲಿ ವ್ಯತ್ಯಾಸವಾದರೆ ಮಹಿಳೆಯರು ತಮ್ಮ ಪತಿಗೆ ಹೆಚ್ಚು ಲೈಂಗಿಕ ಸುಖ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೆ ಇದು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಸಂಶೋಧನೆ ನಡೆಸಲು ಚೆಲೋಮ್ ಎ ಲೇವಿಟ್ ಅವರು 169 ವಿವಿಧ ರೀತಿಯ ನಿರೀಕ್ಷಿಕ ದಂಪತಿಗಳನ್ನು ಸಂದರ್ಶಿಸಿ 12 ತಿಂಗಳು ಅಧ್ಯಯನ ನಡೆಸಿ ಈ ವರದಿ ಅನಾವರಣಗೊಳಿಸಿದ್ದಾರೆ.
Comments are closed.