ಚೆನ್ನೈ (ಪಿಟಿಐ): ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆ ತಮಿಳುನಾಡಿನ ತಿರುಪುರ್ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದ ₹ 570 ಕೋಟಿ ಹಣದ ಬಗ್ಗೆ ವರದಿ ನೀಡುವಂತೆ ಮದ್ರಾಸ್ ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.
ಈ ಸಂಬಂಧ ಡಿಎಂಕೆ ಸಂಸದ ಇಳಂಗೋವನ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ಸುಬ್ಬಯ್ಯ ಅವರು ಸಿಬಿಐನ ಚೆನ್ನೈ ವಿಭಾಗದ ಮುಖ್ಯಸ್ಥರಿಗೆ ಎರಡು ವಾರಗಳಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದರು.
ಮೇ 13ರಂದು ತಿರುಪುರ್ ಜಿಲ್ಲೆಯಲ್ಲಿ ಮೂರು ಲಾರಿಗಳಲ್ಲಿ ಹಣ ಸಾಗಿಸಲಾಗುತ್ತಿತ್ತು. ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿ 195 ಬಾಕ್ಸ್ಗಳಲ್ಲಿದ್ದ ₹ 570 ಕೋಟಿಯನ್ನು ವಶಪಡಿಸಿಕೊಂಡಿದ್ದರು.
‘ಇದು ಹವಾಲಾ ಹಣ ಎಂಬ ಅನುಮಾನ ಇದೆ. ಈ ಬಗ್ಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಸಿಬಿಐಗೆ ಸೂಚಿಸಬೇಕು’ ಎಂದು ಮನವಿ ಮಾಡಿದರು.
Comments are closed.