ಬಳ್ಳಾರಿ: ‘ಫೇಸ್‌ಬುಕ್ ಅಕೌಂಟ್ ನನ್ನದಲ್ಲ. ಯಾರು ನನ್ನ ಹೆಸರಿನಲ್ಲಿ ಸ್ಟೇಟಸ್ ಹಾಕುತ್ತಿದ್ದಾರೋ ಗೊತ್ತಿಲ್ಲ’
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಹೇಳಿದ ಮಾತುಗಳಿವು.
ಜೂನ್ 4ರಂದು ರಾಜೀನಾಮೆ ನೀಡಿದ ಬಳಿಕ ಅಜ್ಞಾತ ಸ್ಥಳದಲ್ಲಿದ್ದ ಅನುಪಮಾ ಅವರ ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಆಗುತ್ತಿದ್ದ ಸ್ಟೇಟಸ್‌ಗಳು ಭಾರೀ ‘ಸದ್ದು’ ಮಾಡಿದ್ದವು.
ಆದರೆ, ಇದೀಗ ಅನುಪಮಾ ಅವರು, ‘ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಿರುವುದು ಯಾರೆಂದು ಗೊತ್ತಿಲ್ಲ’ ಎಂದಿದ್ದಾರೆ.
ಹಾಗಾದರೆ ಈವರೆಗೆ ಫೇಸ್‌ಬುಕ್‌ನಲ್ಲಿ ಹಾರಾಡಿದ ಕಥೆಗಳಿಗೆಲ್ಲಾ ‘ಸೂತ್ರದಾರ’ರು ಯಾರು ಎಂಬ ಪ್ರಶ್ನೆ ಈಗ ಎದ್ದಿದೆ.
Comments are closed.