ಮಂಗಳೂರು,ಜೂ.10: ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಜಾಲ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಗುರುವಾರ ನಗರದ ವಿವಿಧೆಡೆ ಕಾರ್ಯಚರಿಸುತ್ತಿರುವ ಮಸಾಜ್ ಪಾರ್ಲರ್ಗಳಿಗೆ ಸಿಸಿಬಿ ಪೊಲೀಸರ ತಂಡ ದಾಳಿ ಮಾಡಿ, ಐವರನ್ನು ಬಂಧಿಸಿದೆ.
ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಪೊಲೀಸರ ತಂಡ ನಗರದ ವಿವಿಧ ಕಡೆಗಳಲ್ಲಿರುವ ಮಸಾಜ್ ಪಾರ್ಲರ್ ಸೆಂಟರ್ಗಳಿಗೆ ದಾಳಿ ಮಾಡಿ ಒಟ್ಟು ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.ಸಿಸಿಬಿ ಪೊಲೀಸರು ಮಂಗಳೂರಿನ ಸಿಟಿ ಸೆಂಟರ್ ಬಳಿಯಿರುವ ಎಸ್.ಆರ್.ಆಯುರ್ ಮಸಾಜ್ ಸೆಂಟರ್, ಕೆ.ಎಸ್.ಆರ್.ಟಿ.ಸಿ ಬಳಿಯಿರುವ ಫಾಮ್ ಟಚ್ ಮಸಾಜ್ ಸೆಂಟರ್ಗೆ ದಾಳಿ ನಡೆಸಿದ್ದಾರೆ.
ಕಣ್ಣೂರು ನಿವಾಸಿ ರವೂಫ್ (32), ಬಂಟ್ವಾಳ ನಿವಾಸಿ ಮನೋಜ್ (40), ಉರ್ವಸ್ಟೋರ್ ನಿವಾಸಿ ಪ್ರಕಾಶ್ (30), ವಿಟ್ಲ ಕಸಬಾ ನಿವಾಸಿ ದಿನೇಶ್ (32) ಮತ್ತು ಉಡುಪಿ ಬೈಲೂರು ನಿವಾಸಿ ಇಬ್ರಾಹಿಂ (50) ಎಂಬವರನ್ನು ಸಿಸಿಬಿ ತಂಡ ಬಂಧಿಸಿದೆ.
ಮಂಗಳೂರಿನಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿರುವ ವೇಶ್ಯಾವಾಟಿಕೆ ಜಾಲ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದರೂ, ಕೆಲವೊಮ್ಮೆ ಮಾತ್ರ ಇಂತಹ ಅಡ್ಡೆಗಳಿಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುತ್ತಾರೆ. ಆದರೆ ಈ ಜಾಲವನ್ನು ಸಂಪೂರ್ಣವಾಗಿ ನಿಯಂತ್ರಣಗೊಳಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದೇ ಹೇಳ ಬಹುದು.
Comments are closed.