ಕರ್ನಾಟಕ

ಮದುವೆ..? ಹೆಣ್ಣು,ಗಂಡಿನ ನಡುವೆ ಹೊಂದಾಣಿಕೆಯ ಹೊಸ ದಾರಿ

Pinterest LinkedIn Tumblr

marriage

ಹೆಣ್ಣು ಮಕ್ಕಳಿಗೆ ಹೇಗೆ ಮದುವೆಯಾದ ಬಳಿಕ ಹೊಸ ಮನೆಗೆ ಹೋಗಬೇಕೆಂಬ ಚಿಂತೆ ಇರುತ್ತದೋ, ಹಾಗೆಯೇ ಮದುವೆಯ ಮೊದಲು ಹುಡುಗರನ್ನೂ ಪತ್ನಿಯೊಂದಿಗೆ ಹೇಗೆ ಹೊಂದಿಕೊಳ್ಳುವುದು, ಅನಿಸಿಕೆಗಳ ಹೊಂದಾಣಿಕೆ, ಆತ್ಮವಿಶ್ವಾಸದ ಕೊರತೆಯಂತಹ ಹಲವಾರು ಯೋಚನೆಗಳು ಕಾಡುತ್ತಿರುತ್ತವೆ. ಅಷ್ಟಕ್ಕೂ ಮದುವೆಗೂ ಮೊದಲು ಇವರಲ್ಲಿ ಭಯ ಹುಟ್ಟಿಸುವ ವಿಚಾರಗಳು ಯಾವುದು? ಯಾಕೆ? ಇಲ್ಲಿದೆ

ಹೊಂದಾಣಿಕೆಯೇ ಬಹುದೊಡ್ಡ ಸಮಸ್ಯೆ
ಹುಡುಗರ ಮನದಲ್ಲಿ ಅತ್ಯಂತ ಹೆಚ್ಚಿನ ಭಯ ಇರುವುದು ಮದುವೆಯಾಗಿ ಬಂದ ತನ್ನ ಮಡದಿಯೊಡನೆ ಹೊಂದಿಕೊಳ್ಳುವುದು ಹೇಗೆ ಎಂಬ ವಿಚಾರವಾಗಿ. ತವರು ಮನೆಯನ್ನು ತೊರೆದು ಬರುವ ಆಕೆ ತನ್ನ ತಂದೆ-ತಾಯಿ, ಅಕ್ಕ-ತಂಗಿ, ಅಣ್ಣ-ತಮ್ಮಂದಿರೊಂದಿಗೆ ಹೊಂದಿಕೊಳ್ಳುವಳೇ, ಅವರ ಮಾತುಗಳನ್ನು ಅರಿತುಕೊಳ್ಳುವಳೇ ಎಂಬ ಪ್ರಶ್ನೆ ಆತನನ್ನು ಇನ್ನಿಲ್ಲದಂತೆ ಕಾಡುತ್ತಿರುತ್ತವೆ.

ಆದರೆ ಈ ಚಿಂತೆಯನ್ನು ದೂರ ಮಾಡಲು ಇರುವ ಉತ್ತಮ ದಾರಿ ಮದುವೆಯಾಗಲಿರುವ ಹುಡುಗಿಯೊಂದಿಗೆ ಮನಬಿಚ್ಚಿ ಮಾತನಾಡುವುದರೊಂದಿಗೆ, ಆಕೆಯೊಂದಿಗೆ ಕೆಲ ಸಮಯ ಕಳೆಯುವುದು. ಈ ವೇಳೆ ತನ್ನ ಮನೆಯವರ ಇಷ್ಟಗಳ ಕುರಿತು ತಿಳಿಸುವುದು. ಇದರಿಂದ ಹುಡುಗಿಗೂ ನಿಮ್ಮ ಮನೆಯಲ್ಲಿ ಹೊಂದಿಕೊಳ್ಳುವುದು ಸುಲಭವಾಗುತ್ತದೆ.

ಆರ್ಥಿಕ ಸಮಸ್ಯೆ
ಮದುವೆಯ ಬಳಿಕ ಹುಡುಗ ತನ್ನ, ಹಾಗೂ ಮನೆಯವರ ಸೇರಿದಂತೆ ಮನೆಗೆ ಬರುವ ಹೊಸ ಸದಸ್ಯೆಯ ಜವಾಬ್ದಾರಿಯನ್ನು ನೋಡಿಕೊಳ್ಳಬೇಕಾಗುತ್ತದೆ. ತನ್ನ ಮನೆಯವರು ಈವರೆಗೂ ತನ್ನ ಆರ್ಥಿಕ ಸ್ಟೇಟಸ್’ನಿಂದ ಸಮಾಧಾನದಿಂದ್ದರು ಆದರೆ ತನ್ನ ಹೆಂಡತಿಯಾಗುವವಳು ಖುಷಿಪಡುವಳೇ ಎಂಬುವುದಷ್ಟೇ ಹುಡುಗನ ಭಯಕ್ಕೆ ಕಾರಣವಾಗಿರುತ್ತದೆ. ಈ ಸಂದರ್ಭದಲ್ಲಿ ನೀವು ಮದುವೆಯಾಗಲಿರುವ ಹುಡುಗಿಗೆ ಉದ್ಯೋಗ ಮಾಡಲು ನೀನು ಸ್ವತಂತ್ರಳೆನ್ನುವುದು ಉತ್ತಮ. ಹೀಗೆ ಮಾಡುವುದರಿಂದ ಹುಡುಗಿ ತನ್ನ ಜವಾಬ್ದಾರಿಯನ್ನು ಖುದ್ದು ನಿರ್ವಹಿಸಬಲ್ಲಳು ಜೊತೆಗೆ ಒಟ್ಟಾರೆ ಜವಾಬ್ದಾರಿಯಲ್ಲಿ ನಿಮಗೆ ಜೊತೆ ಸಿಕ್ಕಂತಾಗುತ್ತದೆ.

ಅಭಿಪ್ರಾಯಗಳಲ್ಲಿ ಭಿನ್ನತೆ
ಪ್ರತಿಯೊಬ್ಬ ಮನುಷ್ಯನ ಸ್ವಭಾವ ಭಿನ್ನವಾಗಿರುತ್ತದೆ. ಹೀಗಿರುವಾಗ ಭಿನ್ನಾಭಿಪ್ರಾಯಗಳು ಕಂಡು ಬರುವುದು ಸಹಜ. ಹೀಗಾಗಿ ಮಾತು ಕತೆ ಪ್ರತಿಯೊಂದು ಸಂಬಂಧಗಳಲ್ಲಿ ಮಹತ್ವ ಪಡೆದುಕೊಳ್ಳುತ್ತದೆ ಇದರಿಂದ ನಿಮ್ಮ ಸಂಬಂಧಗಳನ್ನು ನೀವು ಕಾಪಾಡಿಕೊಳ್ಳಬಹುದು. ಇದರಿಂದ ಭಿನ್ನಾಭಿಪ್ರಾಯಗಳು ಹುಡ್ಡಿಕೊಂಡರೂ ಹೆಚ್ಚಿನ ಸಮಯ ಉಳಿದುಕೊಳ್ಳುವುದಿಲ್ಲ

Comments are closed.