ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಜಗ್ಗುದಾದಾ’ ಇಂದು ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ರಾಘವೇಂದ್ರ ಹೆಗಡೆ ಅವರು ಆಕ್ಷನ್-ಕಟ್ ಹೇಳಿದ ‘ಜಗ್ಗುದಾದಾ’ ರಾದಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಗೆ ಜೊತೆಯಾಗಿ ಖ್ಯಾತ ನಟಿ ದೀಕ್ಷಾ ಸೇಠ್ ಅಭಿನಯಿಸಿದ್ದು ದರ್ಶನ್ ಕೆರಿಯರ್ ನ ವಿಭಿನ್ನ ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದೆ.
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಎತ್ತರದ ದರ್ಶನ್ ಕಟೌಟ್ ಗೆ ಅಭಿಮಾನಿಗಳು ಕ್ಷೀರಾಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ನೆಚ್ಚಿನ ನಟನ ಚಿತ್ರ ನೋಡಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ.
ಬೆಂಗಳೂರಿನ ಆವಲಹಳ್ಳಿಯಲ್ಲಿರುವ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದು, ವಿಳಂಬವಾಗಿ ಪ್ರದರ್ಶನ ಆರಂಭಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಇನ್ನು ರಾಜ್ಯಾದ್ಯಂತ ‘ಜಗ್ಗುದಾದಾ’ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು, ಕೆಲವು ಕಡೆಗಳಲ್ಲಿ ರಾತ್ರಿಯಿಂದಲೇ ಟಿಕೆಟ್ ಗಾಗಿ ಚಿತ್ರಮಂದಿರದ ಬಳಿ ಕಾಯುತ್ತಿದ್ದ ದೃಶ್ಯ ಕಂಡು ಬಂದಿದೆ. ಜಗ್ಗುದಾದಾ ಕರ್ನಾಟಕದಾದ್ಯಂತ ಮಾತ್ರವಲ್ಲದೆ ದೆಹಲಿ, ಮುಂಬೈ, ನಾಸಿಕ್, ಪುಣೆಯಲ್ಲೂ ಬಿಡುಗಡೆಯಾಗ್ತಿದೆ. ಎಲ್ಲಾ ಸೇರಿ ಒಟ್ಟು 350 ಸ್ಕ್ರೀನ್ಗಳಲ್ಲಿ ಏಕಕಾಲಕ್ಕೆ ‘ಜಗ್ಗುದಾದಾ’ ತೆರೆ ಕಾಣುತ್ತಿದೆ.
Comments are closed.