ಮುಂಬೈ(ಪಿಟಿಐ): ‘ಉಡ್ತಾ ಪಂಜಾಬ್‘ ಚಿತ್ರ ಕುರಿತು ಅತಿಯಾದ ಟೀಕೆ ಬೇಡ ಎಂದು ಸೆನ್ಸಾರ್ ಮಂಡಳಿಗೆ ಸೂಚಿಸಿರುವ ಬಾಂಬೆ ಹೈಕೋರ್ಟ್, ಚಿತ್ರದಲ್ಲಿ ಅತಿ ಅಸಭ್ಯ ದೃಶ್ಯಗಳು ಇರುವುದು ಸಲ್ಲ ಎಂದು ಹೇಳಿದೆ.
ಸೆನ್ಸಾರ್ ಮಂಡಳಿ ಚಿತ್ರದಲ್ಲಿನ ಹಲವು ದೃಶ್ಯಗಳಿಗೆ ಕತ್ತರಿ ಹಾಕಿ, ‘ಎ’ ಪ್ರಮಾಣಪತ್ರ ನೀಡಿದ್ದನ್ನು ಪ್ರಶ್ನಿಸಿ ಚಿತ್ರ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಸಿ. ಧರ್ಮಾಧಿಕಾರಿ ಹಾಗೂ ಶಾಲಿನಿ ಪನ್ಸಾಲ್ಕರ್ ಜೋಷಿ ಅವರನ್ನೊಳಗೊಂಡ ವಿಭಾಗೀಯ ಪೀಠವು ತೀರ್ಪನ್ನು ಜೂನ್ 13ಕ್ಕೆ ಕಾಯ್ದಿರಿಸಿದೆ.
ಪಂಜಾಬ್ ಹೆಸರನ್ನು ತೆಗೆದು ಹಾಕಿದರೆ ಅದು ಚಿತ್ರದ ಉದ್ದೇಶವನ್ನೇ ಮರೆಮಾಚುತ್ತದೆ ಎಂದಿರುವ ಕೋರ್ಟ್, ಚಿತ್ರ ಡ್ರಗ್ಸ್ ಮಾಫೀಯಾವನ್ನು ವೈಭವೀಕರಿಸುವಂತಿದ್ದರೆ ಚಿತ್ರವನ್ನೇ ನಿಷೇಧಿಸಿ ಎಂದು ಹೇಳಿದೆ.
Comments are closed.