ಬೆಂಗಳೂರಿನ ಕಾಟನ್ ಪೇಟೆಯಲ್ಲಿ ಮಕ್ಕಳನ್ನು ಅಕ್ರಮವಾಗಿ ಕೂಡಿ ಹಾಕಿ ಕೆಲಸ ಮಾಡಿಸಿಕೊಳ್ಳುತಿದ್ದ ಮನೆ ಮೇಲೆ ಸಿಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಿ ಹದಿನಾಲ್ಕು ವರ್ಷದ ಒಳಗಿನ ಇಪ್ಪತ್ತಕ್ಕೂ ಹೆಚ್ಚು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಬೇರೆ ಬೇರೆ ರಾಜ್ಯಗಳಿಂದ ಮಕ್ಕಳನ್ನು ಕರೆತಂದು ಕಾಟನ್ ಪೇಟೆಯ ಬ್ಯಾಗ್ ಕಾರ್ಖಾನೆಯಲ್ಲಿ ಕಡಿಮೆ ಸಂಬಳ ಕೊಟ್ಟು ದಿನ ಪೂರ್ತಿ ದುಡಿಸಿಕೊಳ್ಳಲಾಗುತ್ತಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ತಿಯಾಜ್ ಮತ್ತು ಶಂಶಾದ್ ಎಂಬ ಮಾಲೀಕರಿಬ್ಬರನ್ನು ಬಾಲ ಕಾರ್ಮಿಕ ಕಾಯ್ದೆ, ಅಕ್ರಮ ಬಂಧನ, ಕಿರುಕುಳ ಆರೋಪದ ಮೇಲೆ ಬಂಧಿಸಲಾಗಿದೆ. ಈ ಕುರಿತಂತ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.