ಅಂತರಾಷ್ಟ್ರೀಯ

ಅಕ್ರಮ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ ಭಾರತೀಯನಿಗೆ 15 ತಿಂಗಳು ಜೈಲು

Pinterest LinkedIn Tumblr

srrr
ನ್ಯೂಯಾರ್ಕ್,ಜೂ.10- ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ 21ರ ಹರೆಯದ ಭಾರತೀಯನೊಬ್ಬನಿಗೆ ಇಲ್ಲಿನ ನ್ಯಾಯಾಲಯ 15 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ವಹಿವಾಟು ನಡೆಸುತ್ತಿದ್ದ ಶಮಾ ಸುಖ್‌ದೇವ್‌ನನ್ನು ಅಪರಾಧಿ ಎಂದು ನ್ಯಾಯಾಲಯ ಡಿಸೆಂಬರ್‌ನಲ್ಲೇ ತೀರ್ಮಾನಿಸಿತ್ತು.

ಶಿಕ್ಷೆ ಇದೀಗ ಪ್ರಕಟವಾಗಿದೆ. 15 ತಿಂಗಳ ಸೆರೆವಾಸದೊಂದಿಗೆ ಮೂರು ಸಾವಿರ ಡಾಲರ್ ದಂಡವನ್ನೂ ವಿಧಿಸಿದ್ದು ,1 5 ತಿಂಗಳ ಕಾರಾಗೃಹ ವಾಸದ ನಂತರ ಎರಡು ವರ್ಷಗಳ ಕಾಲ ಪೊಲೀಸರ ಕಣ್ಗಾವಲಿನಲ್ಲೇ ಇರುವಂತೆಯೂ ಹೇಳಿದೆ.

ಎಫ್‌ಬಿಐ(ಫೆಡರಲ್ ಇನ್ವೇಸ್ಟಿಗೇಷನ್ ಬ್ಯೂರೊ)ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬನಿಗೆ ಸುಖದೇವ್ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದ. 2014ರಲ್ಲಿ ಇದು ಬಯಲಾಗಿ ಅವನನ್ನು ಬಂಧಿಸಲಾಗಿತ್ತು ಎಂದು ಜಿಲ್ಲಾ ನ್ಯಾಯಾಧೀಶ ಲಾಕಿನ್ಸ್ ಖಾನ್ ತಿಳಿಸಿದ್ದಾರೆ.

Comments are closed.