ಅಹಮದಾಬಾದ್: 2ನೇ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ ವ್ಯಕ್ತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಮಹಿಳೆಯರು ಮತ್ತು ಒಬ್ಬ ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.
ಪರ್‌ಸೊತಮ್ ಮಾರ್ವಿಯಾ ಅವರ ಪತ್ನಿ ಮೂರುವರೆ ವರ್ಷದ ಹಿಂದೆ ತೀರಿಕೊಂಡಿದ್ದರು, ಕುಟುಂಬದವರು ಅವರಿಗೆ ಇತ್ತೀಚೆಗೆ ಮರು ಮದುವೆ ಮಾಡಲು ನಿರ್ಧರಿಸಿದ್ದರು. ವಿಷಯ ತಿಳಿದ ಶೀಲಾ ಕ್ರಿಶ್ಚಿಯನ್ ಎಂಬಾಕೆ ಕರೆ ಮಾಡಿ ಹುಡುಗಿ ತೋರಿಸುವುದಾಗಿ ಅಹಮದಾಬಾದ್‌ಗೆ ಕರೆಸಿದ್ದರು. ಮತ್ತೊಮ್ಮೆ ನಗರಕ್ಕೆ ಕರೆಸಿಕೊಂಡು ಮಂಜುಳಾ ಎಂಬಾಕೆ ಸೇರಿದಂತೆ ಹಲವು ಹುಡುಗಿಯರನ್ನು ತೋರಿಸಿದರು. ಆದರೆ ಪರ್‌ಸೊತಮ್ ಮಾರ್ವಿಯಾ ನಿರಾಕರಿಸಿದ್ದರು.
ಕೆಲವು ದಿನದ ಬಳಿಕ ಮಂಜುಳಾ ಕರೆ ಮಾಡಿ, ‘ನಿಮ್ಮನ್ನೇ ಮದುವೆಯಾಗುತ್ತೇನೆ, ನೀವು ಒಪ್ಪದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಸಾಯುವೆ,’ ಎಂದು ಬೆದರಿಸಿದ್ದಳು. ಹೆದರಿದ ಪರ್‌ಸೊತಮ್ ಮಾರ್ವಿಯಾ ಅಹಮದಾಬಾದ್‌ಗೆ ಹೋಗಿ ಆಕೆಯನ್ನು ಭೇಟಿಯಾಗಿದ್ದರು. ಬಳಿಕ ಆಕೆ ಮತ್ತೊಂದು ಹುಡುಗಿಯೊಂದಿಗೆ ಮಾರ್ವಿಯಾ ಜತೆ ಮೌಂಟ್ ಅಬುವಿಗೆ ಹೋದಳು. .ಪರ್‌ಸೊತಮ್ ಮಾರ್ವಿಯಾ ಅವರನ್ನು ಮೌಂಟ್ ಅಬುವಿಗೆ ಕರೆದೊಯ್ದು ಅಲ್ಲಿನ ವಸತಿಗೃಹದಲ್ಲಿ ಮತ್ತು ಬರುವ ಪಾನೀಯ ನೀಡಿ ಅಸಭ್ಯ ಭಂಗಿಗಳಲ್ಲಿ ಪೋಟೊ ತೆಗೆಯಲಾಗಿತ್ತು. ಅವರಲ್ಲಿದ್ದ ಚಿನ್ನಾಭರಣ, ನಗದನ್ನು ದೋಚಲಾಗಿತ್ತು. ನಂತರ ಆ ಪೋಟೊಗಳನ್ನು ಮುಂದಿಟ್ಟು 5 ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಲಾಗುತ್ತಿತ್ತು.
ಈ ಬೆನ್ನಲ್ಲೆ ಮತ್ತೊಬ್ಬ ವ್ಯಕ್ತಿ ಕರೆ ಮಾಡಿ 25 ಲಕ್ಷ ರೂ. ನೀಡದಿದ್ದರೆ ಅಸಭ್ಯ ಪೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸುತ್ತಿದ್ದ. ಆತನಿಗೆ ಹಣ ನೀಡಲು ಬಂದಾಗ ಮಾರ್ವಿಯಾ ಪುತ್ರ ಅವರನ್ನು ಪ್ರಶ್ನಿಸಿದಾಗ ಎಲ್ಲಾ ವಿವರವನನ್ನು ಮಗನಿಗೆ ನೀಡಿದ್ದಾರೆ, ನಂತರ ಅಪ್ಪ ಮಗ ಇಬ್ಬರು ಸೇರಿ ಪೊಲೀಸರಿಗೆ ದೂರು ನೀಡಿ. ಆತನಿಗೆ 5 ಲಕ್ಷ ರೂ. ನೀಡುವುದಾಗಿ ಹೇಳಿ ಕರೆಸಿದ್ದಾರೆ. ಮಂಜುಳಾ, ಡೈಸಿ, ಶೈಲಾ, ಮೈಕೆಲ್ ಜೊಸೆಫ್ ಎಂಬುವರು ಪೊಲೀಸರು ಬಿಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ರಾಷ್ಟ್ರೀಯ
Comments are closed.