ಕರಾವಳಿ

ಕಾಗೆ, ಗುಬ್ಬಚ್ಚಿ, ಗಿಳಿ, ಪಾರಿವಾಳಗಳಿಗೆ ಆಸರೆ ನೀಡುವ ಪಕ್ಷಿಪ್ರಿಯ ಪತ್ರಕರ್ತ ‘ರೋನ್ಸ್ ಬಂಟ್ವಾಳ’

Pinterest LinkedIn Tumblr

Mumbai_Bird_ Bathing_13

ಮುಂಬಯಿ, ಜೂ.11 : ಮುಂಬಯಿ ಮಹಾನಗರದಲ್ಲಿನ ವಿಪರೀತ ಸೆಕೆಗೆ ಮನುಷ್ಯರಿಕ್ಕಿಂತಲೂ ಪ್ರಾಣಿಪಕ್ಷಿಗಳು ತತ್ತರಿಸಿ ತಮ್ಮ ಪ್ರಾಣಿಪಕ್ಷಿಯನ್ನೇ ಕಳಕೊಳ್ಳುವುದು ಕಳವಳಕಾರಿ ಸಂಗತಿಯಾಗಿದೆ. ಅವುಗಳೂ ಜೀವವನ್ನುಳಿಸಿ ಕೊಳ್ಳಲು ಮರಗಿಡ, ನೀರು ಗಾಳಿಯ ಆಸರೆಗಾಗಿ ಚಡಬಡಿಸುತ್ತಿದ್ದು ಅವುಗಳ ರಕ್ಷಣೆಗಾಗಿ ಪ್ರಾಣಿಪಕ್ಷಿಪ್ರಿಯರು ಅವುಗಳತ್ತ ದಯೆತೋರಿಸುತ್ತಿದ್ದಾರೆ.

ಆ ಪಯ್ಕಿ ಮಹಾನಗರದ ಯುವ ಪತ್ರಕರ್ತ, ಪರಿಸರ ಪ್ರೇಮಿ ರೋನ್ಸ್ ಬಂಟ್ವಾಳ್ ಪಕ್ಷಿಗಳ ಬಳಲುವಿಕೆಗೆ ಮೊರೆ ಹೋಗಿ ತನ್ನ ನಿವಾಸದ ಗ್ಯಾಲರಿಯಲ್ಲಿ ಹೂದೋಟದ ಸೃಷ್ಟಿಸಿ ಅವುಗಳ ರಕ್ಷಣೆಗೆ ಶ್ರಮಿಸುತ್ತಿದ್ದಾರೆ.

Mumbai_Bird_ Bathing_1 Mumbai_Bird_ Bathing_2 Mumbai_Bird_ Bathing_3 Mumbai_Bird_ Bathing_4 Mumbai_Bird_ Bathing_5 Mumbai_Bird_ Bathing_6 Mumbai_Bird_ Bathing_7 Mumbai_Bird_ Bathing_8 Mumbai_Bird_ Bathing_9 Mumbai_Bird_ Bathing_10 Mumbai_Bird_ Bathing_11 Mumbai_Bird_ Bathing_12 Mumbai_Bird_ Bathing_14 Mumbai_Bird_ Bathing_15 Mumbai_Bird_ Bathing_16 Mumbai_Bird_ Bathing_17 Mumbai_Bird_ Bathing_18 Mumbai_Bird_ Bathing_19 Mumbai_Bird_ Bathing_20 Mumbai_Bird_ Bathing_21 Mumbai_Bird_ Bathing_22 Mumbai_Bird_ Bathing_23 Mumbai_Bird_ Bathing_24 Mumbai_Bird_ Bathing_25 Mumbai_Bird_ Bathing_26 Mumbai_Bird_ Bathing_27 Mumbai_Bird_ Bathing_28 Mumbai_Bird_ Bathing_29 Mumbai_Bird_ Bathing_30 Mumbai_Bird_ Bathing_31 Mumbai_Bird_ Bathing_32 Mumbai_Bird_ Bathing_33 Mumbai_Bird_ Bathing_34 Mumbai_Bird_ Bathing_35 Mumbai_Bird_ Bathing_36 Mumbai_Bird_ Bathing_37 Mumbai_Bird_ Bathing_38 Mumbai_Bird_ Bathing_39 Mumbai_Bird_ Bathing_40

ತನ್ನ ಅಂಧೇರಿ ಪೂರ್ವದ ಚಕಾಲದಲ್ಲಿನ ಲವ್‌ವ್ಹೀವ್ ನಿವಾಸದ ಗ್ಯಾಲರಿಯಲ್ಲಿ ಹತ್ತಾರು ಹೂಗಿಡಗಳಿಂದ ಕಿರು ಪುಷ್ಪ‌ಉದ್ಯಾನ ರೂಪಿಸಿ ಕಾಗೆಗಳು, ಗುಬ್ಬಚ್ಚಿ, ಪಾರಿವಾಳ, ಗಿಳಿ, ಮತ್ತಿತರ ಅನೇಕಾನೇಕ ಪಕ್ಷಿಗಳಿಗೆ ಆಸರೆಯನ್ನೀಡಿದ್ದಾರೆ. ಪಕ್ಷಿಗಳ ಆರೈಕೆಗಾಗಿ ಜೋಕಾಲಿಗಳನ್ನು ನೇತಾಡಿಸಿ ಅವುಗಳದ್ದೇ ಕ್ಯಾಲ್ಸಿಯಂ ಭರಿತ ಆಹಾರ, ನೀರು ಇನ್ನಿತರ ಆಹಾರವನ್ನು ಇಟ್ಟು ಸ್ವತಂತ್ರವಾಗಿ ಓಡಾಡಿಕೊಂಡಿರುವ ನೂರಾರು ಪಕ್ಷಿಗಳ ಜೀವರಕ್ಷಣೆ ಮಾಡುತ್ತಿದ್ದಾರೆ.

ಮುಂಜಾನೆ ಸುರ್ಯೋದಯದಿಂದ ಸಂಜೆ ಸೂರ್ಯೋಸ್ತಮದ ವರೇಗೆ ಇಲ್ಲಿ ಪಕ್ಷಿಗಳು ಮುದ್ದಾಗಿ ಅಡ್ಡಾಡಿ ನರ್ತಿಸುತ್ತಿವೆ. ಸದ್ಯ ಅತೀವ ಸೆಖೆಯಿಂದ ಒದ್ದಾಡುವ ಪಕ್ಷಿಗಳಿಗೆ ಸ್ನಾನದ ವ್ಯವಸ್ಥೆಯೂ ಇದ್ದು ಪಕ್ಷಿಗಳು ಕ್ಷಣಕ್ಷಣಕ್ಕೂ ಮೈನವಿರೇಳಿಸಿ ಸ್ವಿಮ್ಮಿಂಗ್ ಮಾಡುತ್ತಾ ತಮ್ಮ ದೇಹವನ್ನು ತಂಪಾಗಿಸಿ ಮಜ್ಹಾ ಅನುಭವುಸುತ್ತಾ ಕಾಲ ಕಳೆಯುವುದು ಕಾಣುವ ಕಣ್ಣುಗಳಿಗೆ ಪಕ್ಷಿಪ್ರಿಯರಿಗಂತೂ ಮುದನೀಡು ವಂತಿದೆ.

Comments are closed.