ವಾಷಿಂಗ್ಟನ್,.15 : ಒರ್ಲಾಂಡ್ನ ಗೇ ಕ್ಲಬ್ ಮೇಲೆ ದಾಳಿ ನಡೆಸಿದ್ದ ಒಮರ್ ಮಟೀನ್ ಸಲಿಂಗ ಕಾಮಿಯಾಗಿದ್ದು, ನಾಚಿಕೆ ಮತ್ತು ಕೋಪದ ಕಾರಣ ತನ್ನ ನೈಜ್ಯ ಅಸ್ಮಿತೆಯನ್ನು ಮುಚ್ಚಿಡಲು ಬಯಸಿದ್ದಿರಬಹುದು ಎಂದು ಆತನ ಮಾಜಿ ಪತ್ನಿ ಸಿತೊರಾ ಯೂಸುಫಿ ಹೇಳಿದ್ದಾಳೆ. ಫ್ಲೋರಿಡಾ ಕ್ಲಬ್’ಗೆ ಆತ ಹಲವು ಬಾರಿ ಭೇಟಿ ನೀಡಿದ್ದ ಮತ್ತು ಗೇ ಡೇಟಿಂಗ್ ಆಯಪ್ ಬಳಸುತ್ತಿದ್ದ ಎಂಬ ವರದಿಗಳ ಬಗ್ಗೆ ಎಫ್ಬಿಐ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಸಿತೊರಾ ಮತ್ತು ಮಟೀನ್ 2008ರಲ್ಲಿ ಆನ್ಲೈನ್ನಲ್ಲಿ ಪರಿಚಯವಾಗಿ 2009ರಲ್ಲಿ ಮದುವೆಯಾಗಿದ್ದರು. ತನ್ನನ್ನು ಮದುವೆಯಾಗುವುದಕ್ಕೂ ಮೊದಲು ಮಟೀನ್ ನೈಟ್ಕ್ಲಬ್ಗಳಿಗೆ ಸದಾ ಹೋಗುತ್ತಿದ್ದ ಎಂದು ಹೇಳಿಕೊಂಡಿದ್ದ. ಆದರೆ ಗೇ ಕ್ಲಬ್ಗಳ ಬಗ್ಗೆ ಹೇಳಿರಲಿಲ್ಲ ಎಂದು ಸಿತೊರಾ ಹೇಳಿದ್ದಾಳೆ.
ಮಟೀನ್ನನ್ನು ಹಲವು ಬಾರಿ ಗೇ ಬಾರ್ಗಳಲ್ಲಿ ನೋಡಿರುವುದಾಗಿ ಕೆಲವು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.
ಮತ್ತೊಂದೆಡೆ ಫ್ರಾನ್ಸ್ನ ಮಗ್ನಾನ್ ವಿಲ್ಲೆಯ ಲೆಸ್ ಮೂರಾಕ್ಸ್ನಲ್ಲಿ ಐಎಸ್ ಗುಂಪಿಗೆ ಸೇರಿದ್ದಾತನೆಂದು ಹೇಳಲಾದ ವ್ಯಕ್ತಿ ಫ್ರಾನ್ಸ್ ಪೊಲೀಸ್ ಸಿಬ್ಬಂದಿ ಹಾಗೂ ಅವರ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಕಾರ್ಯಾಚರಣೆಯಲ್ಲಿ ಆತನನ್ನು ಕೊಂದು ಹಾಕಲಾಗಿದೆ.
Comments are closed.