ಕೆಮರೂನ್ ಜೂ.16 : ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ 8 ಪತ್ನಿಯರು, 16 ಸಾವಿರ ಗೋಪಿಕೆಯರು ಇದ್ದರೆಂಬುದು ಪುರಾಣಗಾಥೆ. ಆದರೆ ಆಫ್ರಿಕಾದ ಬುಡಕಟ್ಟು ಪ್ರಾಂತ್ಯದ ರಾಜನೋರ್ವ 100 ಪತ್ನಿಯರನ್ನು ಹೊಂದಿದ್ದಾನೆ. ನಂಬಲು ಸಾಧ್ಯವಿಲ್ಲದಿದ್ದರೂ ನಂಬಲೇಬೇಕಾದಂಥ ವಿಚಾರವಿದು.
ಹೌದು ಆಫ್ರಿಕಾದ ಕೆಮರೂನ್’ನಲ್ಲಿ ಬಪುಟ್ ಎನ್ನುವ ಬುಡಕಟ್ಟು ಪ್ರದೇಶದಲ್ಲಿರುವ ಈಗಿನ ಅಬುಂಬಿ-2 ರಾಜನಿಗೆ 100 ಪತ್ನಿಯರಿದ್ದಾರಂತೆ. ಅಬುಂಬಿ2ಯ ತಂದೆ ಅಚಿರಿಂಬಿ2, 72 ಮಂದಿಯನ್ನು ಮದುವೆಯಾಗಿದ್ದ. 1968ರಲ್ಲಿ ಅಚಿರಿಂಬಿ-2ನ ಸಾವಿನ ಬಳಿಕ ಸಿಂಹಾಸನವೇರಿದ ಅಬುಂಬಿ-2 ತಂದೆಯ ಪತ್ನಿಯರನ್ನು ತನ್ನ ಪತ್ನಿಯರನ್ನಾಗಿ ಮಾಡಿಕೊಂಡಿರುವುದರ ಜೊತೆಗೆ ಹತ್ತಾರು ಮಂದಿಯನ್ನು ಮದುವೆಯಾಗಿದ್ದಾನೆ.
ಈಗ ಆತನ ಪತ್ನಿಯರ ಸಂಖ್ಯೆ 100 ದಾಟಿದೆ. ಹೀಗಾಗಿ ವಿಶ್ವದಲ್ಲೇ 100 ಹೆಂಡತಿಯರು ಇರುವ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ದಾನೆ. ಅಲ್ಲದೇ 100 ಮಂದಿ ಪತ್ನಿಯರಿರುವ ಅಬುಂಬಿ-2ಗೆ ಬರೋಬ್ಬರಿ 500 ಮಕ್ಕಳಿದ್ದಾರೆ!
Comments are closed.