ಅಂತರಾಷ್ಟ್ರೀಯ

ಒಪ್ಪಂದ ಉಲ್ಲಂಘನೆ ಮಾಡಿದ ಭಾರತೀಯ ಟಾಟಾ ಸಂಸ್ಥೆಗೆ 1.17 ಶತಕೋಟಿ ಡಾಲರ್ ದಂಡ

Pinterest LinkedIn Tumblr

tata

ಟೋಕಿಯೋ: ಒಪ್ಪಂದ ಉಲ್ಲಂಘನೆ ಮೂಲಕ ನಷ್ಟ ಉಂಟುಮಾಡಿದ ಆರೋಪದಲ್ಲಿ ಜಪಾನಿನ ದೈತ್ಯ ಕಂಪೆನಿ ಡೊಕೊಮೊಗೆ 1.17 ಶತಕೋಟಿ ಡಾಲರ್ ಪರಿಹಾರ ನೀಡುವಂತೆ ಭಾರತೀಯ ಟಾಟಾ ಸಂಸ್ಥೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ನಿರ್ದೇಶನ ನೀಡಿದೆ.

ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನು ಬಗೆಹರಿಸುವ ಲಂಡನ್‌ನ ನ್ಯಾಯಾಲಯ ಡೊಕೊಮೊ ಕಂಪೆನಿ ದೂರನ್ನು ಅಂಗೀಕರಿಸಿ ವಿಚಾರಣೆ ನಡೆಸಿದಾಗ ಟಾಟಾ ಕಂಪೆನಿಯಿಂದ ಅನ್ಯಾಯವಾಗಿರುವುದು ಸಾಬೀತಾಗಿದ್ದು, ಪರಿಹಾರ ಪಾವತಿಗೆ ಆದೇಶ ನೀಡಲಾಗಿದೆ ಎಂದು ಡೊಕೊಮೊ ಕಂಪೆನಿ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

2009ರ ನವೆಂಬರ್‌ನಲ್ಲಿ ಡೊಕೊಮೊ ಕಂಪೆನಿಯು ಟಾಟಾ ದೂರ ಸಂಪರ್ಕ ಸೇವೆಗಳ ಕ್ಷೇತ್ರದಲ್ಲಿ ಶೇ.26.5ರಷ್ಟು ಷೇರು ಹೂಡಿಕೆ ಮಾಡಿತ್ತು. ಅಂದರೆ ಷೇರ್ ಒಂದಕ್ಕೆ 117ರೂ. ಮೌಲ್ಯದಂತೆ 12,740 ಕೋಟಿ ರೂ.ಗಳ ಹೂಡಿಕೆ ಮಾಡಿತ್ತು. ಆ ನಂತರ 2014ರ ಏಪ್ರಿಲ್‌ನಲ್ಲಿ ಚಂದಾದಾರರನ್ನು ಗಣನೀಯವಾಗಿ ತ್ವರಿತಗತಿಯಲ್ಲಿ ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಂಪೆನಿ ಹೊರಬರಲು ನಿರ್ಧರಿಸಿತ್ತು. ಭಾರತೀಯ ಕಂಪೆನಿಯನ್ನು ಐದು ವರ್ಷಗಳಲ್ಲಿ ತ್ಯಜಿಸಿದರೆ ಕನಿಷ್ಠ ಶೇ.50ರಷ್ಟು ಲಾಭವನ್ನು ಡೊಕೊಮೊ ಪಡೆಯಬೇಕಾಗುತ್ತದೆ ಎಂಬುದರ ಬಗ್ಗೆ ಪರಸ್ಪರ 2008ರಲ್ಲಿ ಒಪ್ಪಂದವೂ ಆಗಿತ್ತು.

ಈ ಎಲ್ಲ ವಿವಾದಗಳ ಹಿನ್ನೆಲೆಯಲ್ಲಿ ಡೊಕೊಮೊ 2015ರ ಜನವರಿ 5ರಂದು ದೂರು ಸಲ್ಲಿಸಿ ನ್ಯಾಯ ಕೊಡಿಸುವಂತೆ ಕೇಳಿಕೊಂಡಿತ್ತು. 2016ರ ಜೂ.23ರಂದು ಲಂಡನ್‌ನ ಅಂತಾರಾಷ್ಟ್ರೀಯ ನ್ಯಾಯಾಲಯವು ಡೊಕೊಮೊ ಕಂಪೆನಿಗೆ ತೀರ್ಪಿನ ಕಾಪಿ ರವಾನಿಸಿದ್ದು, ಅದರಲ್ಲಿ ಭಾರತದ ಟಾಟಾ ಕಂಪೆನಿ ಜಪಾನ್ ಕಂಪೆನಿಗೆ 1.17 ಶತಕೋಟಿ ಡಾಲರ್ ಪರಿಹಾರ ಕಟ್ಟಿಕೊಡುವಂತೆ ಆದೇಶಿಸಿರುವುದಾಗಿ ತಿಳಿಸಿದೆ.

Comments are closed.