ರಾಷ್ಟ್ರೀಯ

ಹೈದರಾಬಾದ್‌ನಲ್ಲಿ ಐವರು ಶಂಕಿತ ಉಗ್ರರ ವಶ: ಐಎಸ್‌ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ

Pinterest LinkedIn Tumblr

HY-d-niaಹೈದರಾಬಾದ್‌ (ಪಿಟಿಐ): ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಹೈದರಾಬಾದ್‌ನ ವಿವಿಧ ಕಡೆಗಳಲ್ಲಿ ಮಂಗಳವಾರ ರಾತ್ರಿ ದಾಳಿ ನಡೆಸಿದ್ದು, ಕನಿಷ್ಠ 5 ಮಂದಿ ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ಪೊಲೀಸರ ನೆರವಿನಿಂದ ಎನ್‌ಐಎ ಅಧಿಕಾರಿಗಳು ಹೈದರಾಬಾದ್‌ನ ಮೊಘಲ್‌ಪುರ ಮತ್ತು ಭವಾನಿನಗರ ಪ್ರದೇಶದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದರು.

‘ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದರೆಂಬ ಶಂಕೆಯ ಮೇಲೆ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಐಎ ವಶಕ್ಕೆ ಪಡೆದಿರುವ ಉಗ್ರರು ಐಎಸ್‌ ಸಂಘಟನೆಯೊಂದಿಗೆ ನಂಟು ಹೊಂದಿರಬಹುದು ಎನ್ನಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ಖಚಿತ ಪಡಿಸಿಲ್ಲ.

Comments are closed.