ರಾಷ್ಟ್ರೀಯ

ಸಂಪುಟ ಪುನಾರಚನೆ: ಮೋದಿ ಸಂಪುಟದಿಂದ ಡಿವಿ ಸದಾನಂದ ಗೌಡ ಔಟ್?

Pinterest LinkedIn Tumblr

Sadananda-Gowda-ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಳ್ಳುವ ಮೊದಲು ಜುಲೈ 4ರೊಳಗೆ ನಡೆಯಲಿರುವ ಕೇಂದ್ರ ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇರುವುದಾಗಿ ಸಿಎನ್ಎನ್ ನ್ಯೂಸ್ 18 ವರದಿ ಮಾಡಿದೆ.

5 ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಸಚಿವ ಸಂಪುಟ ಪುನಾರಚನೆ ನಡೆಯುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ ಹಲವು ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಕೆಲವರಿಗೆ ಕೊಕ್ ದೊರೆಯಲಿದೆ ಎಂದು ವರದಿ ಹೇಳಿದೆ.

ಕೇಂದ್ರ ಕಾನೂನು ಸಚಿವ ಡಿವಿಎಸ್ ಔಟ್?
ಈ ಮೊದಲು ಕೇಂದ್ರ ರೈಲ್ವೆ ಮಂತ್ರಿಯಾಗಿ, ಹಾಲಿ ಕಾನೂನು ಸಚಿವರಾಗಿರುವ ಡಿ.ಸದಾನಂದ ಗೌಡ ಅವರಿಗೆ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದ್ದಿರುವುದಾಗಿ ಮೂಲಗಳು ತಿಳಿಸಿರುವುದಾಗಿ ಸಿಎನ್ ಎನ್ ನ್ಯೂಸ್ 18 ವರದಿ ಮಾಡಿದೆ.

ಯುಪಿ, ಪಂಜಾಬ್, ಗುಜರಾತ್ ಚುನಾವಣೆ ಮೇಲೆ ಕಣ್ಣು?
ಮುಂದಿನ ಉತ್ತರಪ್ರದೇಶ, ಪಂಜಾಬ್, ಗುಜರಾತ್ ಚುನಾಣೆಯ ಮೇಲೂ ಬಿಜೆಪಿ ಕಣ್ಣಿಟ್ಟಿದ್ದು, ಆ ಹಿನ್ನೆಲೆಯಲ್ಲಿ ಮುಂದಿನ ವಾರ ನಡೆಯಲಿರುವ ಸಂಪುಟ ಪುನಾರಚನೆಯಲ್ಲಿ ಆ ರಾಜ್ಯದ ಸಂಸದರಿಗೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಅಲ್ಲದೇ ಸಂಪುಟದಿಂದ ಯಾರು ಔಟ್ ಮತ್ತು ಇನ್ ಎಂಬ ಬಗ್ಗೆ ಕುತೂಹಲ ಮೂಡಿಸಿದೆ.
-ಉದಯವಾಣಿ

Comments are closed.