ಕರ್ನಾಟಕ

ಜೈಲಿನಿಂದಲೆ ಐಐಟಿಗೆ ಪ್ರವೇಶ ಗಿಟ್ಟಿಸಿದ ಯುವಕ

Pinterest LinkedIn Tumblr

jailಕೋಟಾ: ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿರುವ ಪಿಯೂಶ್ ಗೋಯಲ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಜೈಲಿನಲ್ಲಿದ್ದುಕೊಂಡೇ ವಿದ್ಯಾಭ್ಯಾಸ ಮಾಡಿ ಐಐಟಿ ಪ್ರವೇಶ ಪರೀಕ್ಷೆಯಲ್ಲಿ 453 ನೇ ರ್ಯಾಂಕ್ ಪಡೆದಿದ್ದಾನೆ. ಹಾಗೆಂದ ಮಾತ್ರಕ್ಕೆ ಈ ಸಾಧನೆ ಮಾಡಿದ ಯುವಕ ಅಪರಾಧಿಯಲ್ಲ, ಈತನ ತಂದೆ ಅಪರಾಧ ಮಾಡಿ 14 ವರ್ಷ ಜೈಲುವಾಸ ಅನುಭವಿಸುತ್ತಿದ್ದಾನೆ.

ಬಡ ಕುಟುಂಬವಾದ್ದರಿಂದ ಇರಲು ಸೂರಿಲ್ಲದೆ ಕಳೆದ ಎರಡು ವರ್ಷಗಳಿಂದ ತನ್ನ ತಂದೆಯ ಜತೆಗೆ ಬಯಲು ಬಂದೀಖಾನೆಯಲ್ಲಿ ವಾಸಿಸುತ್ತಿದ್ದಾನೆ. ಕಾಲೇಜು ಹಾಸ್ಟೆಲ್ನಲ್ಲಿಟ್ಟು ಓದಿಸಬೇಕೆಂದರೆ ಪಿಯೂಶ್ ತಂದೆಗೆ ಅಷ್ಟೊಂದು ಆದಾಯವಿಲ್ಲ. ಪುಸ್ತಕ ಕೊಳ್ಳಲು ಸಹ ಹಣವಿಲ್ಲದ ಪರಿಸ್ಥಿತಿಯಲ್ಲಿ ಐಐಟಿಗೆ ಪ್ರವೇಶ ಗಿಟ್ಟಿಸಿರುವುದು ಈ ಯುವಕನ ಸಾಧನೆ.

ಮಗನ ಓದಿಗೆ ಸಹಾಯವಾಗಲಿ ಎಂದು ಪಿಯೂಶ್ನ ತಂದೆ ಜೈಲು ಖೈದಿಯಾಗಿದ್ದರು, ಆತನಿಗೆ ಆವರಣ ಬಿಟ್ಟು ನಗರದಲ್ಲಿ ಕೆಲಸ ಮಾಡಿ ಸಂಜೆ ಹೊತ್ತಿಗೆ ಬಂದೀಖಾನೆ ಸೇರಲು ಅವಕಾಶ ನೀಡಿದೆ ಜೈಲು ಆಡಳಿತ. ತಮ್ಮ 12 ಸಾವಿರ ರೂಪಾಯಿ ಸಂಬಳದಿಂದ ಪಿಯೂಶ್ ತಂದೆ ಮಗನ ಓದಿಗೆ ವ್ಯಯಿಸುತ್ತಿದ್ದಾನೆ. ಪೊಲೀಸರು ಕೂಡ ಪಿಯೂಶ್ ಓದಿಗೆ ಸಹಕರಿಸುತ್ತಿದ್ದಾರೆ ಎಂದು ಆತನ ತಂದೆ ಫೂಲ್ ಚಂದ್ ಹೇಳಿದ್ದಾನೆ.

Comments are closed.