ಮನೋರಂಜನೆ

ಮತ್ತೆ ಒಂದಾದ ಶಾರೂಖ್, ಸಲ್ಮಾನ್ ಖಾನ್ ಮುಂಬೈ ರೋಡಲ್ಲಿ ಸೈಕ್ಲಿಂಗ್; ಜೊತೆಗೆ ಆರ್ಯನ್ ಖಾನ್ ಜಾಲಿರೈಡ್

Pinterest LinkedIn Tumblr

Salman-han-Shah-Rukh-Khan

ಮುಂಬೈ: ಸಲ್ಮಾನ್ ಖಾನ್ ಹಾಗೂ ಶಾರೂಖ್ ಖಾನ್ ಗೆಳೆತನ ಬ್ಯಾಕ್ ಟು ಪೆವಿಲಿಯನ್ ರೀತಿ ಮತ್ತೆ ಟ್ರ್ಯಾಕ್‍ಗೆ ಬಂದಿದೆ. ಶಾರೂಖ್ ಮೇಲಿನ ಪ್ರೀತಿಯನ್ನ ಸಲ್ಮಾನ್ ಸುಲ್ತಾನ್ ಟ್ರೇಲರ್‍ನಲ್ಲಿ ವ್ಯಕ್ತಪಡಿಸಿದ್ರು, ಇದೀಗ ಶಾರೂಖ್ ಟ್ವಿಟ್ಟರ್‍ನ ಮೂಲಕ ಸಲ್ಮಾನ್ ಜೊತೆಗೆ ಸೈಕಲ್ ರೈಡಿಂಗ್ ಮಾಡಿದ್ದರು ಸವಿ ಕ್ಷಣಗಳನ್ನ ಹಂಚಿಕೊಂಡಿದ್ದಾರೆ.

srk-aryan-salman1

ಸೈಕಲ್ ಎತ್ತಿಕೊಂಡ ಸಲ್ಮಾನ್ ಹಾಗೂ ಶಾರೂಖ್ ಮುಂಬೈ ರಸ್ತೆಯಲ್ಲಿ ಅವರ ಅಭಿಮಾನಿಗಳಿಗೆ ಮಾಲಿನ್ಯ ಮುಕ್ತದ ಬಗ್ಗೆ ಸಂದೇಶವನ್ನ ಸಾರಿದ್ದಾರೆ. ಇವರಿಬ್ಬ ಜೊತೆಗೆ ಈಗಲೇ ಸ್ಟಾರ್ ಪಟ್ಟ ಪಡೆದುಕೊಂಡಿರುವ ಆರ್ಯನ್ ಖಾನ್ ಜಾಲಿರೈಡ್ ಮಾಡಿದ್ದಾರೆ.

ಹಲವು ವರ್ಷಗಳ ಹಿಂದೆ ಕತ್ರಿನಾ ಕೈಫ್ ಬರ್ತ್‍ಡೇ ಸಮಯದಲ್ಲಿ ಬೇರ್ಪಟ್ಟಿದ್ದ ಸಲ್ಮಾನ್ ಖಾನ್ ಹಾಗೂ ಶಾರೂಖ್ ಗೆಳತನದಲ್ಲಿ ಈಗ ಎಲ್ಲವೂ ಸರಿಹೊದಂತೆ ಕಾಣುತ್ತಿದೆ. ಈ ಇಬ್ಬರು ಸ್ಟಾರ್‍ಗಳು ಕರಣ್ ಅರ್ಜುನ್, ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ ಒಟ್ಟಾಗಿ ಹಚ್ಚಿದ್ದರು. ಇದೀಗ ಇವರ ಅಭಿಮಾನಿಗಳು ಮತ್ತೆ ಇಬ್ಬರನ್ನು ಒಟ್ಟಿಗೆ ನೋಡಲು ಕಾದುಕುಳಿತಿದ್ದಾರೆ.

Comments are closed.