ಲಾಸ್ ಏಂಜಲೀಸ್: ನಾಯಿಗಳು ಹಲವು ಬಾರಿ ತಮ್ಮ ಟ್ಯಾಲೆಂಟ್‍ನಿಂದ ದಾಖಲೆ ಮಾಡಿವೆ. ಈಗ ಅಮೆರಿಕದಲ್ಲಿ ಒಂದು ನಾಯಿ ಬಲೂನ್‍ಗಳನ್ನ ಒಡೆಯುವ ಮೂಲಕ ಗಿನ್ನಿಸ್ ದಾಖಲೆ ಬರೆದಿದೆ.
ಲಾಸ್ ಏಂಜಲೀಸ್ ಬಲೂನ್ ಒಡೆಯುವ ಸ್ಪರ್ಧೇಯಲ್ಲಿ ಟ್ವಿಂಕಿ(ಜ್ಯಾಕ್ ರುಸೆಲ್) ಹೆಸರಿನ ನಾಯಿಯೊಂದು ಕೇವಲ 39.08 ಸೆಕೆಂಡ್‍ಗೆ 100 ಬಲೂನ್‍ಗಳನ್ನ ಒಡೆದುಹಾಕುವ ಮೂಲಕ ನೂತನ ಗಿನ್ನಿಸ್ ದಾಖಲೆ ಮಾಡಿದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಟ್ವಿಂಕಿ ತನ್ನ ಮುಂದಿದ್ದ 100 ಬಲೂನ್‍ಗಳನ್ನ ಬಾಯಿಯಲ್ಲಿ ಕಚ್ಚಿ ಒಡೆಯುವ ಮೂಲಕ ಈ ಸಾಧನೆ ಮಾಡಿದೆ. 2015ರಲ್ಲಿ ಮೇನಲ್ಲಿ ಕ್ಯಾಲಿ(ವಂಡರ್ ಡಾಗ್) ಎಂಬ ನಾಯಿ 41.67 ಸೆಕೆಂಡ್‍ಗೆ 100 ಬಲೂನ್‍ಗಳನ್ನ ಒಡೆದು ಹಾಕಿ ದಾಖಲೆ ನಿರ್ಮಿಸಿತ್ತು.
Comments are closed.