ಕರ್ನಾಟಕ

ಕೊಚ್ಚಿ : ಮಂಗಳಮುಖಿಯರಿಗೆ ಮೊದಲ ಬಾರಿಗೆ ಉದೋಗ್ಯದವಕಾಶ ನೀಡಲು ಕೆಎಂಆರ್‌ಎಲ್ ನಿರ್ಧಾರ

Pinterest LinkedIn Tumblr

managala_muki_pic

ಕೊಚ್ಚಿ ಜು.7 : ಮುಂದಿನ ವರ್ಷದಿಂದ ಆರಂಭವಾಗಲಿದೆ ಎಂದು ಹೇಳಲಾಗಿರುವ ಕೊಚ್ಚಿ ಮೆಟ್ರೋನಲ್ಲಿ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಗ್ರಾಹಕರ ಸೇವೆ, ಗುಂಪು ನಿರ್ವಹಣೆ ಹಾಗೂ ಡಿ ಗ್ರೂಪ್ ನೌಕರಿಗಳನ್ನು ನೀಡಲಾಗುವುದು ಎಂದು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ (ಕೆಎಂಆರ್‌ಎಲ್)ನ ಅಧಿಕಾರಿಗಳು ತಿಳಿಸಿದ್ದಾರೆ.

ಕೊಚ್ಚಿ ನಗರ ಪೊಲೀಸರ ಸಲಹೆ ಮೇರೆಗೆ ಕೆಎಂಆರ್‌ಎಲ್‌ನ ಹಿರಿಯ ಆಡಳಿತಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮಾಜದ ಪ್ರಮುಖ ಸ್ಥರಗಳಲ್ಲಿ ಲಿಂಗಪರಿವರ್ತಕರಿಗೆ ಕೆಲಸ ಸಿಗುವುದು ಹಾಗೂ ನೀಡುವುದು ಬಹಳ ಕಷ್ಟ. ಅವರು ಕೆಎಂಆರ್‌ಎಲ್ನ ಖಾಸಾ ಉದ್ಯೋಗಿಗಳಾಗಿರುವುದಿಲ್ಲ ಆದರೆ ಮೆಟ್ರೋ ಆಡಳಿತದ ಭಾಗವಾಗಿರುತ್ತಾರೆ ಎಂದು ತಿಳಿಸಿದರು.

Comments are closed.