ಶಿಮ್ಲಾ: ಸಲ್ಮಾನ್ ಖಾನ್ ಹಾಗೂ ಅನುಷ್ಕಾ ಶರ್ಮಾ ಅಭಿನಯದ ಸುಲ್ತಾನ್ ಚಿತ್ರ ಎಲ್ಲೆಡೆ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ. ಇದೀಗ ಸಲ್ಮಾನ್ ಫ್ಯಾನ್‍ವೊಬ್ಬ ಪತ್ನಿ ಜೊತೆ ಚಿತ್ರವನ್ನ ನೋಡಲು ಇಡೀ ಥಿಯೇಟರ್‍ನನ್ನೇ ಬುಕ್ ಮಾಡಿದ್ದನಂತೆ.
ಹಿಮಾಚಲ ಪ್ರದೇಶದ ಹಮಿರ್‍ಪುರ್‍ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಿವಾಸಿ ಶಂಕತ್ ಮಾಝಾಪಿರ್ ಎಂಬಾತ ತನ್ನ ಪತ್ನಿಗಾಗಿ 120 ಸೀಟ್‍ಗಳಿದ್ದ ಥಿಯೇಟರ್‍ನನ್ನೇ ಬುಕ್ ಮಾಡಿದ್ದಾನೆ. ಶಂಕರ್ ಪತ್ನಿ ಗೀತಾಂಜಲಿ ಸಲ್ಮಾನ್‍ನ ಬಹುದೊಡ್ಡ ಅಭಿಮಾನಿಯಾಗಿದ್ದು, ಹೀಗಾಗಿ ಪತ್ನಿಯನ್ನ ಓಲೈಸಲು ಈತ ಹೀಗೆ ಮಾಡಿದ್ದಾನೆ.
ಸುಲ್ತಾನ್ ಜುಲೈ 6 ರಂದು ವಿಶ್ವಾದ್ಯಂತ ತೆರೆಕಂಡಿದ್ದು, ಒಟ್ಟು 4100 ಥಿಯೇಟರ್‍ಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲದೇ ಚಿತ್ರ ಕೇವಲ 2 ದಿನಕ್ಕೆ ಬರೋಬ್ಬರಿ 75 ಕೋಟಿ ರೂ. ಬಾಚಿದ್ದು ದಾಖಲೆ ನಿರ್ಮಿಸಿದೆ.
Comments are closed.