ಕರಾವಳಿ

ಮುಖ್ಯ ಸಚೇತಕ ಐವನ್ ಸಾನಿಧ್ಯ ವಸತಿ ಶಾಲೆಗೆ ಭೇಟಿ

Pinterest LinkedIn Tumblr

sanidya_ivan_visit_m

ಮಂಗಳೂರು,ಜುಲೈ.08:  ಸರಕಾರದ ಮುಖ್ಯ ಸಚೇತಕರಾದ ಶ್ರೀ ಐವನ್ ಡಿ’ಸೊಜಾರವರು ವಿಶೇಷ ಮಕ್ಕಳ ವಸತಿ ಶಾಲೆ (ಸಾನಿಧ್ಯ) ಇಲ್ಲಿಗೆ ಭೇಟಿ ನೀಡಿ ವಿಶೇಷ ಮಕ್ಕಳಿಂದ ಅಭಿನಂದನೆ ಸ್ವೀಕರಿಸಿದರು.

ಕರ್ನಾಟಕ ರಾಜ್ಯ ಸರಕಾರದ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಐವನ್ ಡಿ’ಸೋಜರವರು ಮಂಗಳೂರಿನ ಶಕ್ತಿನಗರದಲ್ಲಿರುವ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಶಾಲೆ ಸಾನಿಧ್ಯಕ್ಕೆ ಭೇಟಿ ನೀಡಿ ವಿಶೇಷ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆದರು.

ಇದೇ ಸಂದರ್ಭದಲ್ಲಿ ‘ಸಾನಿಧ್ಯದ ಪರವಾಗಿ ಶಾಲಾ ನಾಯಕ ಮಾಸ್ಟರ್ ನಿತೇಶ್, ಉಪನಾಯಕಿ ವೆನಿಶ ಪಾಯಸ್, ಅನುಪ್ ಬಾಳಿಗ, ಗೌತಮ್ ಹಾಗೂ ಶರಧಿ ಮುಖ್ಯ ಸಚೇತಕರನ್ನು ಸನ್ಮಾನಿಸಿದರು.

ಸಾನಿಧ್ಯದ ಆಡಳಿತಾಧಿಕಾರಿ ವಸಂತ್ ಕುಮಾರ್ ಶೆಟ್ಟಿ, ವಿಶೇಷ ಮಕ್ಕಳ ಮೂಲಕ ಪ್ರಾರ್ಥನೆಯನ್ನು ನಡೆಸಿಕೊಟ್ಟು ಶ್ರೀ ಐವನ್ ಡಿ’ಸೋಜರವರನ್ನು ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿದ ಶ್ರೀ ಐವನ್ ಡಿ’ಸೋಜರವರು ಮಾತನಾಡುತ್ತಾ ವಿಶೇಷ ಮಕ್ಕಳು ಮುಖ್ಯವಾಹಿನಿಗೆ ಬರಬೇಕು. ಅವರ ಪಾಲನೆ, ಪೋಷಣೆಯನ್ನು ಸಾನಿಧ್ಯ ವಸತಿಶಾಲೆ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದೆ. ಸರಕಾರದಿಂದ ಇನ್ನು ಹೆಚ್ಚಿನ ಸೌಲಭ್ಯಗಳು ರಾಜ್ಯದ ವಿಶೇಷ ಶಾಲೆಗಳಿಗೆ ದೊರಕಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದರು.

sanidya_ivan_visit_2 sanidya_ivan_visit_1

ಈ ಸಂದರ್ಭದಲ್ಲಿ ಸಾನಿಧ್ಯದ ಖಜಾಂಜಿ ಶ್ರೀ ಜಗದೀಶ್ ಶೆಟ್ಟಿ, ನಿರ್ದೇಶಕರಾದ ಶ್ರೀ ಮಹಮ್ಮದ್ ಬಶೀರ್, ಶ್ರೀ ಸ್ಟೀವನ್ ಪಿಂಟೊ, ಫ್ರೊ. ರಾಧಾಕೃಷ್ಣ, ಸ್ಕೇಟಿಂಗ್ ಕೋಚ್ ಶ್ರೀ ಮಹೇಶ್ ಕುಮಾರ್, ನ್ಯಾಷನಲ್ ಇನ್ಸೂರೆನ್ಸಿನ ಅಭಿವೃದ್ಧಿ ಅಧಿಕಾರಿ ಶ್ರೀ ಮಾಧವ ಸುವರ್ಣ, ಸ್ಥಳೀಯ ಮಕ್ಕಳ ಹೆತ್ತವರು, ಸಾನಿಧ್ಯದ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶ್ರೀಮತಿ ಸುಮಾ ಡಿ’ಸಿಲ್ವಾ ವಂದಿಸಿದರು.

Comments are closed.