ನ್ಯೂಯಾರ್ಕ್: ಅಮೆರಿಕ ಪ್ರವಾಸಕ್ಕಾಗಿ ತೆರಳಿದ್ದ ಭಾರತೀಯ ಕುಟುಂಬವೊಂದು ಕಾರು ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ದುರಂತ ಇಂದು ಬೆಳಗಿನ ಜಾವ ಸಂಭವಿಸಿದೆ.
38 ವರ್ಷದ ಚಂದನಾ ಗವಾಯ್ ಹಾಗೂ ಅವರ ತಂದೆ-ತಾಯಿಗಳಾದ 74 ವರ್ಷದ ಕಮಲ ನಯನ್ ಗವಾಯಿ ಮತ್ತು ತಾಯಿ ಅರ್ಚನಾ ಗವಾಯಿ (60) ಮೂವರೂ ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬಂದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಭಾರೀ ಕುಡಿದು ಲಾರಿ ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆ-ತಾಯಿ ಇಬ್ಬರೂ ಅಮೆರಿಕ ನೋಡಲು ತೆರಳಿದ್ದರು. ಪುತ್ರ ಚಂದನ್ ಗವಾಯಿ ಅಮೆರಿಕದಲ್ಲಿ ನೆಲೆಸಿದ್ದ. ಅಪಘಾತದಿಂದ ಎರಡೂ ವಾಹನಗಳೂ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.
ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಚಂದನ್ ಗವಾಯಿ ಅವರ 32 ವರ್ಷದ ಪತ್ನಿಯ ಸ್ಥಿತಿಯೂ ಗಂಭೀರವಾಗಿದ್ದು ದಂಪತಿಯ 11 ತಿಂಗಳ ಮಗು ಪವಾಡದ ರೀತಿಯಲ್ಲಿ ಬದುಕುಳಿದಿದೆ. ಪತ್ನಿ ಉಳಿಯುವ ಬಗ್ಗೆ ವೈದ್ಯರು ಯಾವುದೇ ಭರವಸೆ ನೀಡಿಲ್ಲ. ಅವರಿಗೆ ಸುಟ್ಟ ಗಾಯಗಳಾಗಿ ತಲೆಗೆ ಬಲವಾದ ಏಟು ಬಿದ್ದಿದೆ. ಕಂಠಪೂರ್ತಿ ಕುಡಿಸಿದ್ದ ಟ್ರಕ್ ಚಾಲಕ 25 ವರ್ಷದ ಜೀಯರ್ ವಾಹನದ ನಿಯಂತ್ರಣ ಕಳೆದುಕೊಂಡಿದ್ದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.