ಕರ್ನಾಟಕ

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಕುರಿತು ಕುಟುಂಬರವರು ಹೇಳಿದ್ದೇನು..?

Pinterest LinkedIn Tumblr

ganapathi

ಮಡಿಕೇರಿ: ನನ್ನ ಸಹೋದರ ಖಿನ್ನತೆಗೆ ಒಳಗಾಗುತ್ತಿದ್ದುದರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಇದೀಗ ಏಕಾಏಕಿ ಆತ್ಮಹತ್ಯೆಗೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ ಎಂದು ರಾಮನಗರ ಡಿವೈಎಸ್‍ಪಿ ತಮ್ಮಯ್ಯ ಪ್ರತಿಕ್ರಿಯಿಸಿದ್ದಾರೆ.

ತಮ್ಮನ್ನು ಭೇಟಿಯಾದ ಮಾಧ್ಯಮದೆದುರು ಮಾತನಾಡಿದ ಅವರು, ನನ್ನ ಸಹೋದರ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿಯೇನೂ ಇರಲಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಕೇಳಿ ಶಾಕ್ ಆಗುವುದರ ಜತೆಗೆ ಅಚ್ಚರಿಯೂ ಆಯಿತು ಎಂದರು.

ಸಹೋದರ ಗಣಪತಿ ಒಮ್ಮೊಮ್ಮೆ ವಿನಾಕಾರಣ ಕೋಪಗೊಳ್ಳುತ್ತಿದ್ದ. ಹೀಗಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ಇಲಾಖೆಯಿಂದ ಯಾವುದೇ ತೊಂದರೆಯಾಗಿರಲಿಲ್ಲ ಎಂದು ಅವರು ತಿಳಿಸಿದರು.

ಸಂಜೆ ಸಹೋದರ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ನಂಬಲು ಸಾಧ್ಯವಾಗಲಿಲ್ಲ. ಒಂದು ರೀತಿ ಶಾಕ್ ಆಯಿತು. ಅಲ್ಲದೆ ಅಚ್ಚರಿಯೂ ಆಯಿತು ಎಂದು ಗಣಪತಿ ಅವರ ಸಹೋದರ ತಮ್ಮಯ್ಯ ಹೇಳಿದ್ದಾರೆ.

ಕುಟುಂಬದವರಿಗೆ ದಿಗ್ಭ್ರಾಂತಿ: ಪತ್ನಿ ಪಾವನಾ
ತಮ್ಮ ಪತಿ ಪೊಲೀಸ್ ಇಲಾಖೆ ವಿಚಾರವಾಗಿ ಹೇಳಿಕೊಂಡಿರುವ ವಿಷಯ ಸತ್ಯವಾದದ್ದು. ಹಿರಿಯ ಅಧಿಕಾರಿಗಳಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದರು. ಅದನ್ನು ನನ್ನ ಬಳಿಯೂ ಹೇಳಿದ್ದರು ಎಂದು ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಗಣಪತಿ ಪತ್ನಿ ಪಾವನಾ ತಿಳಿಸಿದ್ದಾರೆ.

ನನ್ನ ಜತೆಯಲ್ಲೂ ಸಾಕಷ್ಟು ಬಾರಿ ಈ ಬಗ್ಗೆ ಹೇಳಿಕೊಂಡಿದ್ದರು. ಖಿನ್ನತೆಯಿಂದ ಅವರು ಆತ್ಮಹತ್ಯೆಗೆ ಶರಣಾಗಿಲ್ಲ. ನಮಗೆ ಧೈರ್ಯ ಹೇಳುತ್ತಿದ್ದ ಅವರು ಈ ರೀತಿ ಮಾಡಿಕೊಂಡಿರುವುದರಿಂದ ಕುಟುಂಬವರ್ಗಕ್ಕೆ ದಿಗ್ಭ್ರಾಂತಿಯಾಗಿದೆ ಎಂದರು. ನಮ್ಮಲ್ಲಿ ಯಾವುದೇ ರೀತಿಯ ಕೌಟುಂಬಿಕ ಕಲಹವೂ ಸಹ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗಣಪತಿ ಸಹೋದರ ತಮ್ಮಯ್ಯ ನೀಡಿರುವ ಹೇಳಿಕೆಯನ್ನು ತಳ್ಳಿ ಹಾಕಿದರು.

Comments are closed.