ಅಂತರಾಷ್ಟ್ರೀಯ

ಜರ್ಮನಿಗೆ ಸೋಲಿನ ಪೆನಾಲ್ಟಿ : ಯೂರೋ ಕಪ್ ಫೈನಲ್‍ಗೇರಿದ ಫ್ರಾನ್ಸ್

Pinterest LinkedIn Tumblr

foot

ಮರ್ಸಿಲ್ಲೆ (ಫ್ರಾನ್ಸ್): ಫ್ರಾನ್ಸ್ ನ ಮುಂಚೂಣಿ ಆಟಗಾರ ಗ್ರೀಜ್‍ಮನ್ ಗಳಿಸಿದ 2 ಗೋಲುಗಳ ಸಹಾಯದಿಂದ ಪ್ರತಿಷ್ಠಿತ ಜರ್ಮನಿ ವಿರುದ್ಧ ಗೆಲುವು ಸಾಧಿಸಿ ಯೂರೋ ಕಪ್‍ನ ಫೈನಲ್ ಪ್ರವೇಶಿಸಿದೆ.

ಯೂರೋ ಕಪ್‍ನ ಎರಡನೇ ಸೆಮಿಫೈನಲ್‍ನಲ್ಲಿ ಮದಗಜಗಳಂತೆ ಫ್ರಾನ್ಸ್ ಹಾಗೂ ಜರ್ಮನಿ ತಂಡಗಳು ಹೋರಾಡಿದ್ದರು. ಪ್ರಥಮಾರ್ಧ ಮುಗಿಯಲು ಇನ್ನು 5 ನಿಮಿಷಗಳ ಆಟ ಬಾಕಿ ಇರುವಾಗ ಫ್ರಾನ್ಸ್‍ನ ಜೀರ್‍ಮನ್ ಅವರು ಪೆನಾಲ್ಟಿ ಶೂಟೌಟ್ ಮೂಲಕ ಗೋಲ್ ಗಳಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು.

ದ್ವಿತೀಯಾರ್ಧದಲ್ಲಿ ಜರ್ಮನಿ ಆಟಗಾರರು ಫ್ರಾನ್ಸ್‍ನ ಆಟಗಾರರಿಗೆ ಎದುರೇಟು ನೀಡುವಂತೆ ಆಟ ಪ್ರದರ್ಶಿಸಿದ ಜೀರ್‍ಮಾನ್ 72ನೆ ನಿಮಿಷದಲ್ಲಿ ಜರ್ಮನಿಯ ನಾಯಕ ಬ್ಯಾಸ್ಟಿಯನ್ ಸ್ವಿಸ್ಟಿನ್‍ಸ್ಟಿಗರ್ ಎಸೆದ ಹ್ಯಾಂಡ್‍ಬಾಲ್ ಅನ್ನು ಜರ್ಮನಿ ಗೋಲ್‍ಕೀಪರ್ ಮ್ಯಾನುಯಲ್ ನ್ಯೂಯೆರ್ ಅವರ ಕಣ್ಣು ತಪ್ಪಿಸಿ ಪೆನಾಲ್ಟಿ ಗೋಲ್ ಆಗಿ ಪರಿವರ್ತಿಸುವ ಮೂಲಕ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆನಂತರ ಪಂದ್ಯದ ಅಂತಿಮ ಕ್ಷಣದವರೆಗೂ ಜರ್ಮನಿಯ ನಾಯಕ ಬ್ಯಾಸ್ಟಿಯನ್ ಸ್ವಿಸ್ಟಿನ್‍ಸ್ಟಿಗರ್ ಅವರು ಚೆಂಡನ್ನು ಗೋಲಾಗಿ ಪರಿವರ್ತಿಸಲು ವಿಫಲರಾಗಿ 2-0ಯಿಂದ ಪಂದ್ಯ ಕೈಚೆಲ್ಲಿದರು. ಫ್ರಾನ್ಸ್‍ನ ಗ್ರೀಜ್‍ಮನ್ ಅವರು ಸೆಮಿಫೈನಲ್‍ನಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ಪ್ರಸಕ್ತ ಯೂರೋ ಕಪ್‍ನಲ್ಲಿ ಒಟ್ಟು 6 ಗೋಲುಗಳನ್ನು ಗಳಿಸುವ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಗುರುತಿಸಿಕೊಂಡಿದ್ದಾನೆ.

ಪ್ರತಿಷ್ಠಿತ ಫುಟ್‍ಬಾಲ್ ಸರಣಿಯಲ್ಲಿ ಬಲಿಷ್ಠ ಜರ್ಮನಿಯ ವಿರುದ್ಧ ಫ್ರಾನ್ಸ್ 1958ರ ನಂತರ ಯಾವುದೇ ಪಂದ್ಯವನ್ನು ಗೆದ್ದಿರಲಿಲ್ಲ . ನಿನ್ನೆ ನಡೆದ ಪಂದ್ಯದಲ್ಲಿ ಫ್ರಾನ್ಸ್ 2-0 ಗೋಲುಗಳಿಂದ ಗೆಲ್ಲುವ ಮೂಲಕ ಫ್ರಾನ್ಸ್ ಫುಟ್ಬಾಲ್ ಪ್ರೇಮಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಫ್ರಾನ್ಸ್ 1982 ಹಾಗೂ 1986ರಲ್ಲಿ ಸೆಮಿಫೈನಲ್‍ನಲ್ಲಿ ಜರ್ಮನಿಗೆ ಶರಣಾಗಿದ್ದರೆ, 1988ರಲ್ಲಿ ನಡೆದ ಪ್ರತಿಷ್ಠಿತ ವಿಶ್ವಕಪ್‍ನಲ್ಲಿ ಕ್ವಾರ್ಟರ್‍ಫೈನಲ್‍ನಲ್ಲೇ ಫ್ರಾನ್ಸ್ ಮುಗ್ಗರಿಸಿತ್ತು. ಅಲ್ಲದೆ 2000ರ ನಂತರ ಇದುವರೆಗೂ ನಡೆದ ಯೂರೋ ಕಪ್‍ನಲ್ಲಿ ಫ್ರಾನ್ಸ್ ಇದೇ ಮೊದಲ ಬಾರಿಗೆ ಫೈನಲ್ ಹಂತ ತಲುಪಿದ್ದು ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸುವ ಹುಮ್ಮಸ್ಸಿನಲ್ಲಿದೆ.

ಎರಡು ಬಾರಿ ಈರೋ ಕಪ್ ಚಾಂಪಿಯನ್ಸ್ ಆಗಿರುವ ಫ್ರಾನ್ಸ್ ಈಗ ಭಾನುವಾರ ರೋನಾಲ್ಡೋ ಭಾಗತ್ವದ ಫೆÇೀರ್ಚುಗಲ್ ತಂಡದ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.

Comments are closed.