ಬೆಂಗಳೂರು: ಮೊಬೈಲ್ನಲ್ಲಿ ಆನೆ ದಂತಗಳಿರುವ ಫೋಟೋ ವನ್ನು ಸಾರ್ವಜನಿಕರಿಗೆ ತೋರಿಸಿ ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದ ಐದು ಮಂದಿ ದಂತಚೋರರನ್ನು ಬಸವನಗುಡಿ ಪೊಲೀಸರು ಬಂಧಿಸಿ 40 ಕೆಜಿಯ ಎರಡು ವಿದೇಶಿ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ಪುರಂನ ಲೋಕೇಶ್, ವೈಟ್ಫೀಲ್ಡ್ನ ವಿಕ್ಟರ್ ಆಂಥೋನಿ, ರಾಮಮೂರ್ತಿ ನಗರದ ಜಯಪ್ರಕಾಶ್, ಬಾಣಸವಾಡಿಯ ಕಾರ್ತಿಕ್ ಮತ್ತು ರಾಜು ಬಂಧಿತ ಆರೋಪಿಗಳು.
ಬಸವನಗುಡಿ ಬುಲ್ಟೆಂಪಲ್ ರಸ್ತೆಯ ದೊಡ್ಡಗಣಪತಿ ದೇವಸ್ಥಾನದ ಹಿಂಭಾಗ ಆರೋಪಿ ಲೋಕೇಶ್ ಎಂಬಾತ ತನ್ನ ಮೊಬೈಲ್ನಲ್ಲಿ ಆನೆ ದಂತ ಇರುವ ಫೋಟೋ ತೋರಿಸಿ ಮಾರಾಟ ಮಾಡಲು ಗಿರಾಕಿಗಳನ್ನು ಹುಡುಕುತ್ತಿದ್ದ.ಈ ಬಗ್ಗೆ ನಿನ್ನೆ ಬೆಳಗ್ಗೆ ಬಸವನಗುಡಿ ಠಾಣೆ ಇನ್ಸ್ಪೆಕ್ಟರ್ ಶಶಿಧರ್ ಹಾಗೂ ಸಿಬ್ಬಂದಿ ಅವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದಾಳಿ ಮಾಡಿ ಆರೋಪಿ ಲೋಕೇಶ್ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಹಚರರ ಸುಳಿವು ನೀಡಿದ್ದಾನೆ.ಈತನ ಹೇಳಿಕೆ ಮೇರೆಗೆ ವೈಟ್ಫೀಲ್ಡ್ ರಸ್ತೆಯಲ್ಲಿರುವ ಕುರುಬರಹಳ್ಳಿ ಬಸ್ ನಿಲ್ದಾಣದ ಬಳಿ ಆಟೋ ರಿಕ್ಷಾದಲ್ಲಿ ಎರಡು ಆನೆ ದಂತಗಳನ್ನು ಇಟ್ಟುಕೊಂಡಿದ್ದ ನಾಲ್ವರು ಸಹಚರರನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವಿಯಾಗಿದ್ದಾರೆ.
Comments are closed.