ಪಾಟ್ನಾ: ಬಿಹಾರದಲ್ಲಿ ನವ ವಿವಾಹಿತ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಶೌಚಾಲಯ ನಿರ್ಮಿಸದ ಪತಿಗೆ ವಿಚ್ಚೇದನ ನೀಡುವುದಾಗಿ ಘೋಷಿಸಿದ್ದಾರೆ.
ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಖೋತವ ಗ್ರಾಮ ಪಂಚಾಯ್ತಿಯಲ್ಲಿ ಅರ್ಚನಾ ಗೌತಮ್ ಅವರು ಪದೇಪದೆ ಹೇಳಿದರು ಶೌಚಾಲಯ ನಿರ್ಮಿಸದ ತನ್ನ ಪತಿ ಬಬ್ಲು ಕುಮಾರ್ ಗೆ ವಿಚ್ಚೇದನ ನೀಡುವುದಾಗಿ ಗುರುವಾರ ಹೇಳಿದ್ದಾರೆ.
‘ಮಲ, ಮೂತ್ರ ವಿಸರ್ಜನೆಗೆ ಬಯಲಿಗೆ ಹೋಗುವಂತೆ ನನಗೆ ಒತ್ತಡ ಹಾಕುತ್ತಿದ್ದಾರೆ. ಆದರೆ ಬಯಲಿಗೆ ಹೋದಾಗ ಜಮೀನಿನ ಮಾಲೀಕರು ಪದೇಪದೆ ತನಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಅರ್ಚನಾ ತನ್ನ ಅಳಲು ತೊಡಿಕೊಂಡಿದ್ದಾರೆ.
‘ಮನೆಯಲ್ಲಿ ಶೌಚಾಲಯ ಕಟ್ಟಿಸುವಂತೆ ನನ್ನ ಪತಿಗೆ ಕೇಳಿದರೆ, ಅವರು ನಿಮ್ಮ ಅಪ್ಪ, ಅಮ್ಮನಿಗೆ ಹೇಳು ಕಟ್ಟಿಸುತ್ತಾರೆ’ ಅಂತ ಉಡಾಫೆ ಉತ್ತರ ನೀಡುತ್ತಿರುವುದಾಗಿ ಅರ್ಚನಾ ಆರೋಪಿಸಿದ್ದಾರೆ.
ಕಳೆದ ಮೇ ನಲ್ಲಿ ಅರ್ಚನಾ ಹಾಗೂ ಬಬ್ಲು ಮದುವೆಯಾಗಿದ್ದಾರೆ.
Comments are closed.