ಮುಂಬೈ: ತೆಲುಗಿನ ಬಾಹುಬಲಿ ಮತ್ತು ಹಿಂದಿಯ ಭಜರಂಗಿ ಭಾಯಿಜಾನ್ ನಂತ ಬ್ಲಾಕ್ ಬಸ್ಟರ್ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್ ಅವರು ಇದೀಗ ಬಾಬ್ರಿ ಮಸೀದಿ ಧ್ವಂಸದ ಕುರಿತು ಕಥೆ ಬರೆಯುತ್ತಿದ್ದು ಆ ಚಿತ್ರದಲ್ಲಿ ನಾಯಕ ನಟನಾಗಿ ಅಜಯ್ ದೇವಗನ್ ನಟಿಸುವ ಸಾಧ್ಯತೆ ಇದೆ.
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಮೇಲೆ ಕೆಲ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದ್ದರು. ಅಂದಿನಿಂದ ಬಾಬ್ರಿ ಮಸೀದಿ ಬಹು ವಿವಾದಿತ ವಿಷಯವಾಗಿದ್ದರಿಂದ ಕಥೆ ಬರೆದು ನಿರ್ದೇಶನಕ್ಕೆ ಸ್ವತಃ ವಿಜಯೇಂದ್ರ ಪ್ರಸಾದ್ ಅವರೇ ಮುಂದಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಚಿತ್ರವನ್ನು ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪಂಕಜ್ ನಿಹಲಾನಿ ಅವರು ನಿರ್ಮಿಸಲಿದ್ದಾರಂತೆ.
ಚಿತ್ರಕ್ಕೆ ಕಬೀರ್ ಎಂದು ಶೀರ್ಷಿಕೆ ಇಡಲಾಗಿದೆ. ಬಾಬ್ರಿ ಮಸೀದಿ ಧ್ವಂಸದ ಬಳಿಕ ಎದ್ದಿದ್ದ ಹಿಂಸಾಚಾರ ತಡೆಯಲು ಯತ್ನಿಸುವ ವ್ಯಕ್ತಿಯೊರ್ವನ ಕುರಿತಾದ ಕಥೆಯಂತೆ.
Comments are closed.