ರಾಷ್ಟ್ರೀಯ

ರಾಜನಾಥ್ ಸಿಂಗ್-ಪ್ರಗ್ಯಾ ಠಾಕೂರ್ ಭೇಟಿಯನ್ನು ಪ್ರಶ್ನಿಸಿದ ದಿಗ್ವಿಜಯ್ ಸಿಂಗ್

Pinterest LinkedIn Tumblr

Digvijay-Singhನವದೆಹಲಿ: ಉಗ್ರರಿಗೆ ಸ್ಫೂರ್ತಿಯಾಗಿರುವ ಇಸ್ಲಾಮ್ ಪ್ರಚಾರಕ ಜಾಕಿರ್ ನಾಯಕ್ ನೊಂದಿಗೆ ವೇದಿಕೆ ಹಂಚಿಕೊಂಡಿದ್ದಕ್ಕಾಗಿ ತಮ್ಮನ್ನು ಟೀಕಿಸಿದ್ದ ಬಿಜೆಪಿ ವಿರುದ್ಧ ದಿಗ್ವಿಜಯ್ ಸಿಂಗ್ ಹರಿಹಾಯ್ದಿದ್ದಾರೆ.

ತಾವು ಜಾಕಿರ್ ನಾಯಕ್ ನೊಂದಿಗೆ ವೇದಿಕೆ ಹಂಚಿಕೊಂಡಿರುವ ವಿವಾದಕ್ಕೆ ಪ್ರತಿಯಾಗಿ, ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿ ಪ್ರಗ್ಯಾ ಠಾಕೂರ್ ಅವರನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ್ದನ್ನು ಉಲ್ಲೇಖಿಸಿರುವ ದಿಗ್ವಿಜಯ್ ಸಿಂಗ್, ಆರ್ಟ್ ಆಫ್ ಲಿವಿಂಗ್ ನ ಮುಖ್ಯಸ್ಥ ರವಿಶಂಕರ್ ಜಾಕಿರ್ ನಾಯಕ್ ನೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಬಗ್ಗೆ ಆಡಳಿತಾರೂಢ ಪಕ್ಷ ಏನೆನ್ನುತ್ತದೆ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.

ನಾನು ಜಾಕಿರ್ ನಾಯಕ್ ನನ್ನ ಭೇಟಿ ಮಾಡಿದ್ದನ್ನು ವಿರೋಧಿಸಲಾಗುತ್ತಿದೆ. ಆದರೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ಮಾಲೆಗಾಂವ್ ಪ್ರಕರಣದ ಆರೋಪಿ ಸಾದ್ವಿ ಪ್ರಗ್ಯಾ ಅವರನ್ನು ಭೇಟಿ ಮಾಡಿದ್ದರು ಇದಕ್ಕೇನು ಹೇಳುತ್ತೀರಿ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ. ಜಾಕಿರ್ ನಾಯಕ್ ವಿರುದ್ಧ ಈ ವರೆಗೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆದರೆ ಇಂದು ಕೇಂದ್ರ ಗೃಹ ಸಚಿವರಾಗಿರುವ ರಾಜನಾಥ್ ಸಿಂಗ್ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದರು ಎಂದು ದಿಗ್ವಿಜಯ್ ಸಿಂಗ್ ತಕರಾರು ತೆಗೆದಿದ್ದಾರೆ.

ಜಾಕಿರ್ ನಾಯಕ್ ಢಾಕಾದಲ್ಲಿ ದಾಳಿ ನಡೆಸಿದ್ದ ಉಗ್ರರಿಗೆ ಸ್ಫೂರ್ತಿಯಾಗಿದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತಯೇ ದಿಗ್ವಿಜಯ್ ಸಿಂಗ್ 2012 ರಲ್ಲಿ ಜಾಕಿರ್ ನಾಯಕ್ ನೊಂದಿಗೆ ವೇದಿಕೆ ಹಂಚಿಕೊಂಡಿರುವ ವಿಡಿಯೋ ಸಹ ಬಹಿರಂಗವಾಗಿದ್ದು, ಬಿಜೆಪಿ ದಿಗ್ವಿಜಯ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿತ್ತು.

Comments are closed.