ರಾಷ್ಟ್ರೀಯ

1000 ಕಾರ್ ಕದ್ದ ‘ಸೂಪರ್ ಕಳ್ಳ’ನ ಮರು ಬಂಧನ

Pinterest LinkedIn Tumblr

carನವದೆಹಲಿ: 1000 ಕಾರ್ ಕದ್ದ ಕುಖ್ಯಾತಿ ಹೊಂದಿರುವ ‘ಸೂಪರ್ ನಟವರಲಾಲ್’, ಪೊಲೀಸ್ ದಾಖಲೆಗಳಲ್ಲಿ ‘ಭಾರತದ ಶೋಭ್ ರಾಜ್‘ ಎಂದೇ ಗುರುತಿಸಿಕೊಳ್ಳುವ 77 ವರ್ಷದ ಧನಿ ರಾಮ್ ಮಿತ್ತಲ್ ಮತ್ತೆ ವಾಹನ ಕದ್ದ ಆರೋಪದ ಮೇಲೆ ಜೈಲು ಪಾಲಾಗಿದ್ದಾನೆ.

ಮಿತ್ತಲ್ ಮೇಲೆ ಈ ವರ್ಷ 130 ವಾಹನ ಕದ್ದ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಶಾಲಿಮಾರ್‌ನಲ್ಲಿ ಮಾರುತಿ ಎಸ್ಟಿಮ್ ಕಾರ್ ಕದ್ದಿದ್ದ ಆರೋಪದ ಮೇಲೆ ಪೂರ್ವ ದೆಹಲಿಯ ಪಶ್ಚಿಮ ವಿಹಾರದಲ್ಲಿ ಆತನನ್ನು ಬಂಧಿಸಲಾಗಿದೆ. ಕದ್ದ ಕಾರ್‌ನ್ನು ಸ್ಕ್ರ್ಯಾಪ್ ಡೀಲರ್ ಬಳಿ ಮಾರಾಟ ಮಾಡುತ್ತಿದ್ದಾಗ ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಮೇ 4 ರಂದು ಬಿಡುಗಡೆಯಾದ ಬಳಿಕ ಆತ ಕದ್ದ ಎರಡನೆಯ ಕಾರ್ ಇದಾಗಿದೆ. ಮಾರ್ಚ್ ತಿಂಗಳಲ್ಲಿ ಬಂಧಿಸಲ್ಪಟ್ಟಿದ್ದ ಆತನನ್ನು ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು.

ಸುಮಾರು 6 ದಶಕಗಳಿಂದ ಈ ದಂಧೆಯಲ್ಲಿರುವ ಆತ ಲೆಕ್ಕವಿಲ್ಲದಷ್ಟು ಸಲ ಜೈಲಿಗೆ ಹೋಗಿ ಬಂದಿದ್ದಾನೆ. ದೆಹಲಿ, ಹರಿಯಾಣ, ರಾಜಸ್ಥಾನ, ಚಂದೀಘಡ ಮತ್ತು ಪಂಜಾಬ್ ರಾಜ್ಯಗಳಲ್ಲಿ ಆತ ಕಾರುಬಾರು ನಡೆಸುತ್ತಿದ್ದು ಸಾವಿರಕ್ಕಿಂತ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ.

Comments are closed.