ಮುಂಬೈ: ‘ಈದ್’ ಹಬ್ಬದ ಸಂಭ್ರಮ ಎಲ್ಲೆಲ್ಲೂ ಮನೆಮಾಡಿದೆ. ಈದ್ ಹಬ್ಬದ ಆಚರಣೆ ಮಾಡಿರುವ ನಟ ಶಾರೂಖ್ ಖಾನ್ ತಮ್ಮ ಬಾಲ್ಯದ ನೆನಪುಗಳನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ. ರಂಜಾನ್ ಹಬ್ಬಕ್ಕಾಗಿ ನಮಗೆ ಮನೆಯಿಂದ 11 ರೂ. ಸೀಗುತ್ತಿತ್ತು ಎಂದು ತಿಳಿಸಿದ್ದಾರೆ.
‘ರಂಜಾನ್’ ಹಬ್ಬದ ಪ್ರಯುಕ್ತ ಮುಂಬೈನ ಮನ್ನತ್ ನಿವಾಸದಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಶಾರೂಖ್, ಈದ್ ಹಬ್ಬದಂದು ನನಗೆ 11 ರೂ ಸೀಗುತ್ತಿತ್ತು… ನನ್ನ ಕುಟುಂಬ ಸದಸ್ಯರು ಹಾಗೂ ಅಜ್ಜ-ಅಜ್ಜಿ ರಂಜಾನ್ ಹಬ್ಬಕ್ಕೆ 11 ರೂಗಳನ್ನು ನೀಡುತ್ತಿದ್ದರು.
11 ರೂಗಳನ್ನು ಬಟ್ಟೆಯಲ್ಲಿ ಇಟ್ಟು ಅಥವಾ ಕಾರ್ಡ್‌ಲ್ಲಿ ಕೊಡಲಾಗುತ್ತಿತ್ತು. ನನಗೆ ಅಷ್ಟೇನು ನೆನಪಿಸಿಕೊಳ್ಳಲು ಆಗುತ್ತಿಲ್ಲ. ಯಾಕಂದ್ರೆ ನನ್ನ ತಂದೆತಾಯಿ ನಾನು ಚಿಕ್ಕವನಿಂದಾಗಲೇ ನಿಧರಾಗಿದ್ದರು. ನಾನು ಸ್ನೇಹಿತರ ಮನೆಗೆ ತೆರಳುತ್ತಿದ್ದೆ ಇಲ್ಲವೇ ನನ್ನ ಸ್ನೇಹಿತರು ನನ್ನ ಮನೆಗೆ ಬರುತ್ತಿದ್ದರು ಎಂದು ಶಾರೂಖ್ ತಿಳಿಸಿದ್ದಾರೆ.
ಇನ್ನೂ ಇದೇ ವೇಳೆ ಸಲ್ಮಾನ್ ಅಭಿನಯದ ಸುಲ್ತಾನ್ ಚಿತ್ರದ ಬಗ್ಗೆ ಮಾತನಾಡಿರುವ ಅವರು, ಸುಲ್ತಾನ್ ಚಿತ್ರ ರಿಲೀಸ್ ಆಗಿದೆ..
ಖಂಡಿತವಾಗಿಯೂ ಸುಲ್ತಾನ್ ನಾನು ವೀಕ್ಷಿಸು ಚಿತ್ರಗಳ ಲಿಸ್ಟ್‌ನಲ್ಲಿದೆ ಎಂದು ತಿಳಿಸಿದ್ದಾರೆ. ಚಿತ್ರವು ತುಂಬಾ ಚೆನ್ನಾಗಿದೆ ಎಂದು ಹೇಳಲಾಗುತ್ತಿತ್ತು. ಟೈಮ್ ಸಿಕ್ಕಾಗ ಖಂಡಿತ ಸುಲ್ತಾನ್ ಚಿತ್ರ ನೋಡುತ್ತೇನೆ ಎಂದು ಶಾರೂಖ್ ತಿಳಿಸಿದ್ದಾರೆ.
Comments are closed.