ರಾಷ್ಟ್ರೀಯ

ಸಾಕುನಾಯಿ ದೂರ ಮಾಡಿದ್ದಕ್ಕೆ ಆತ್ಮಹತ್ಯೆ ಯತ್ನ

Pinterest LinkedIn Tumblr

dogಪರಮಥಿವೆಲ್ಲೂರ್: ಕೇವಲ ಮೋಜಿಗಾಗಿ ತಮಿಳುನಾಡಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಹಡಿ ಮೇಲಿಂದ ನಾಯಿಯನ್ನು ಕೆಳಕ್ಕೆ ಎಸೆದ
ಅಮಾನವೀಯ ಘಟನೆಯ ಬಗ್ಗೆ ಕೇಳಿರುತ್ತೀರಿ. ಅದಕ್ಕೆ ತದ್ವಿರುದ್ಧವಾದ ಘಟನೆ ಅದೇ ರಾಜ್ಯದಲ್ಲಿ ವರದಿಯಾಗಿದೆ. ಸಾಕು ನಾಯಿ ಮತ್ತು ಅದರ ನವಜಾತ ಮರಿಗಳನ್ನು ತನ್ನಿಂದ ದೂರ ಮಾಡಿದರೆಂದು ಮಹಿಳೆಯೋರ್ವಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪರಮಥಿವೆಲ್ಲೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿರುವ ಶಾಂತಿ ಎರಡು ಮಕ್ಕಳ ತಾಯಿಯಾಗಿದ್ದು, 85 ಪ್ರತಿಶತ ಸುಟ್ಟ ಗಾಯಗಳಿಂದ ಬಳಲುತ್ತಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಂತಿ ಒಂದು ಹೆಣ್ಣು ನಾಯಿಯನ್ನು ಸಾಕಿಕೊಂಡಿದ್ದರು. ಅದನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರಿಗೆ ಇತ್ತೀಚಿಗೆ ಅದು ಮರಿ ಹಾಕಿದಾಗ ಮತ್ತಷ್ಟು ಖುಷಿ ಹೆಚ್ಚಿತ್ತು. ನಾಯಿ ಮತ್ತು ಅದರ ಮರಿಗಳು ರಗಳೆ ಎಂದು ಭಾವಿಸಿದ ಆಕೆಯ ಪತಿ ಅವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಬಂದಿದ್ದ. ಶಾಂತಿ ನಾಯಿಯನ್ನು ಎಷ್ಟು ಪ್ರೀತಿಸುತ್ತಿದ್ದಳೆಂದರೆ ಅಗಲಿಕೆ ಆಕೆಯಿಂದ ಸಹಿಸಲಾಗಲಿಲ್ಲ. ಇದೇ ನೋವಿನಲ್ಲಿ ಆಕೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.

ಇಲ್ಲಿಯವರೆಗೆ ಪ್ರಕರಣವನ್ನು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.