ಕುಂದಾಪುರ: ಅಪ್ರಾಪ್ತ ವಯಸ್ಸಿನ ತಾನಿದ್ದ ಶಾಲೆಯ ವಿದ್ಯಾರ್ಥಿಯನ್ನು ಮೋಹಿಸಿ, ಆತನೊಂದಿಗೆ ಶಿಕ್ಷಕಿ ಪರಾರಿಯಾದ ಪ್ರಕರಣದಲ್ಲಿ ನಿರುಪಾಯನಾದ ಪತಿಗೆ ಕುಂದಾಪುರದ ನ್ಯಾಯಾಲಯ ವಿವಾಹ ವಿಚ್ಛೇದನ ಪರಿಹಾರ ನೀಡಿದೆ.
ದಂಪತಿಗಳ ನಡುವೆ 2013ನೇ ಏಪ್ರಿಲ್ 29 ರಂದು ಕುಂದಾಪುರದ ಪ್ರತಿಷ್ಟಿತ ಸಭಾಭವನದಲ್ಲಿ ಅದ್ಧೂರಿಯಾಗಿ ವಿವಾಹ ಜರಗಿತ್ತು. ದುಬೈನಲ್ಲಿ ಉತ್ತಮ ಉದ್ಯೋಗ ದಲ್ಲಿರುವ ವರನು ಯಾವುದೇ ವರದಕ್ಷಿಣೆಯನ್ನು ಪಡೆದಿರಲಿಲ್ಲ. ಬದಲಾಗಿ ಪತಿಗೆ ಡೈಮೆಂಡ್ ಬೆಂಡೋಲೆ, ಚಿನ್ನದ ಸರ, ಬಳೆಗಳನ್ನು ನೀಡಿದ್ದ. ಅಲ್ಲದೇ ಟಿ.ವಿ. ಮೊಬೈಲ್, ಲ್ಯಾಪ್ ಟಾಪ್, ಮೊಬೈಲ್ ಟ್ಯಾಬ್ ಮೊದಲಾದವುಗಳನ್ನು ಕೊಟ್ಟಿದ್ದ.
ವಿದ್ಯಾರ್ಥಿಯೊಂದಿಗೆ ಲವ್ವಿಡವ್ವಿ..
ಊರಿಗೆ ಬಂದಾಗ ಪತ್ನಿ ಯಾವಾಗಲೂ ಮೊಬೈಲ್ ಸಂಭಾಷಣೆ ಹಾಗೂ ಸಂದೇಶ ರವಾನೆಯಲ್ಲಿರುವುದನ್ನು ಗಮನಿಸಿದ ಪತಿ ಪ್ರಶ್ನಿಸಿದಾಗ ಪತ್ನಿಯು ಹಾರಿಕೆಯ ಉತ್ತರ ನೀಡಿದ್ದಳು. 2015ನೇ ಜನವರಿ 30ರಂದು ಪತ್ನಿಯು ಆಕೆಯ ವಿದ್ಯಾರ್ಥಿ ಜತೆ ಪಲಾಯನ ಮಾಡಿದಾಗ ಮನನೊಂದ ಪತಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮೂಲಕ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.
Comments are closed.