ಭಾರತೀಯ ಅಡುಗೆಯಲ್ಲಿ ಮಸಾಲೆ ಪದಾರ್ಥಗಳದ್ದು ಮುಖ್ಯ ಭಾಗ. ಬಹುತೇಕ ಭಾರತೀಯ ಅಡುಗೆ ಮನೆಯಲ್ಲಿ ವಿವಿಧ ತರಹದ ಮಸಾಲೆ ಪದಾರ್ಥಗಳಿರುತ್ತವೆ. ಮಸಾಲೆ ಹೆಚ್ಚಿದ್ದರೆ ಆರೋಗ್ಯ ಕೆಡುತ್ತದೆ ಎಂಬ ತಪ್ಪು ಭಾವನೆ ಇದೆ. ಆದರೆ, ಅನೇಕ ಭಾರತೀಯ ಮಸಾಲೆ ಪದಾರ್ಥಗಳಲ್ಲಿ ಅದ್ಭುತ ವೈದ್ಯಕೀಯ ಗುಣವಿದೆ. ಅಂಥ ಆರು ಮಸಾಲೆಗಳ ಪರಿಚಯ ಇಲ್ಲಿದೆ.
1) ಕೇಸರಿ: ಭಾರತೀಯ ಅಡುಗೆ ಮತ್ತು ವೈದ್ಯ ಚಿಕಿತ್ಸೆಯಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಇದು ಒತ್ತಡ ಹಾಗೂ ಖಿನ್ನತೆ ನಿವಾರಣೆಗೆ ಪರಿಣಾಮಕರ ಔಷಧವಾಗಿ ಕೆಲಸ ಮಾಡುತ್ತದೆ. ಕೇಸರಿಯು ದೇಹದ ಕೋಶ ನಿರ್ಮಾಣ ಹಾಗೂ ದುರಸ್ತಿಗೆ ಸಹಾಯ ಮಾಡುತ್ತದೆ.
2) ಸೋಂಪು: ಊಟದ ನಂತರ ಸೋಂಪು ಕಾಳನ್ನು ತಿನ್ನುವುದನ್ನು ನೋಡಿರುತ್ತೇವೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಎಂಬ ಕಾರಣದಿಂದ ಈ ಪದ್ಧತಿ ರೂಢಿಯಲ್ಲಿದೆ. ನೂತನ ತಾಯಂದಿರಲ್ಲಿ ಮೊಲೆಹಾಲು ಬತ್ತಿದ್ದರೆ ಸೋಂಪನ್ನು ತಿನ್ನಿಸುತ್ತಾರೆ. ಇದರಿಂದ ಹಾಲು ತುಂಬಿಕೊಳ್ಳುತ್ತದೆ. ಕೆಮ್ಮು, ನೆಗಡಿ ಮೊದಲಾದ ಸಮಸ್ಯೆಗಳಿಗೂ ಸೋಂಪು ರಾಮಬಾಣವೆನಿಸಿದೆ.
3) ದಾಲ್ಚಿನ್ನಿ: ಮಧುಮೇಹದ ತೊಂದರೆ ಇರುವವರಿಗೆ ಇದು ದಿವ್ಯೌಷಧ. ಅಷ್ಟೇ ಅಲ್ಲ, ಇದರಲ್ಲಿ ದೇಹಕ್ಕೆ ಅಗತ್ಯವಿರುವ ಫೈಬರ್ ಅಂಶ ಸಖತ್ತಾಗಿರುತ್ತದೆ. ಸ್ನಾಯು ನೋವಿನ ಶಮನಕ್ಕೂ ಇದನ್ನು ಬಳಸುತ್ತಾರೆ.
4) ಜೀರಿಗೆ: ಇದು ದೇಹದಲ್ಲಿ ಹೀಮೋಗ್ಲೋಬಿನ್ ಮಟ್ಟವನ್ನು ಕಾಪಾಡಲು ಸಹಕಾರಿಯಾಗುತ್ತದೆ. ಇದು ದೇಹದ ಜೀರ್ಣಕ್ರಿಯೆಗೆ ಪುಷ್ಟಿ ನೀಡುತ್ತದೆ. ಹೊಟ್ಟೆಯೊಳಗಿನ ಹುಳಗಳನ್ನು ಕೊಲ್ಲಲು ಸಹಾಯವಾಗುತ್ತದೆ. ಉಸಿರಾಟದ ತೊಂದರೆಯನ್ನು ನಿವಾರಿಸಲು ಜೀರಿಗೆ ಅನುಕೂಲ ಮಾಡಿಕೊಡುತ್ತದೆ.
5) ಜಾಯಿಕಾಯಿ(Nutmeg): ಸ್ನಾಯುನೋವು, ಸಂಧಿವಾತ, ಕೀಲುನೋವು ಮೊದಲಾದ ಸಮಸ್ಯೆಗಳ ನಿವಾರಣೆಗೆ ಇದರ ತೈಲವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜಾಯಿಕಾಯಿಯು ದೇಹದ ವಿಷವನ್ನು ಹೊರಹಾಕುತ್ತದೆ. ದೇಹದ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ.
6) ಅರಿಶಿಣ: ಕೆಲ ತರಹದ ಕ್ಯಾನ್ಸರ್ ರೋಗಗಳಿಗೆ ಅರಿಣಶಿಣ ರಾಮಬಾಣವಾಗಿದೆ. ಇದು ನೈಸರ್ಗಿಕ ಆಯಂಟಿಸೆಪ್ಟಿಕ್ ಎನಿಸಿದೆ. ಮರೆವಿನ ಖಾಹಿಲೆ ಎನ್ನಲಾದ ಆಲ್’ಜೀಮರ್ ರೋಗದ ನಿಯಂತ್ರಣದಲ್ಲೂ ಇದು ಸಹಕಾರಿ.
Comments are closed.