ಅಂತರಾಷ್ಟ್ರೀಯ

ಅಮೆರಿಕ, ಜಪಾನ್ ದೇಶಗಳು ಕೇವಲ ಕಾಗದದ ಹುಲಿಗಳಷ್ಟೆ: ಚೀನಾ ಮಾಧ್ಯಮ

Pinterest LinkedIn Tumblr

South-China-Seaಬೀಜಿಂಗ್: ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಮತ್ತು ತಂತ್ರಜ್ಞಾನದಲ್ಲಿ ಪ್ರಸಿದ್ಧಿ ಪಡೆದಿರುವ ಜಪಾನ್ ದೇಶಗಳು ನಪುಂಸಕ ದೇಶಗಳಾಗಿದ್ದು, ಕೇವಲ ಕಾಗದದ ಹುಲಿಗಳಾಗಿವೆ ಎಂದು ಚೀನಾ ಮಾಧ್ಯಮವೊಂದು ಗುರುವಾರ ವರದಿ ಮಾಡಿದೆ.

ದಕ್ಷಿಣ ಚೀನಾ ಸಮುದ್ರದ ವಿವಾದಕ್ಕೆ ಸಂಬಂಧಿಸಿದಂತೆ ಗ್ಲೋಬರ್ ಟೈಮ್ಸ್ ಪತ್ರಿಕೆ ಸಂಪಾದಕೀಯವೊಂದನ್ನು ಬರೆದಿದ್ದು, ಸಂಪಾದಕೀಯದಲ್ಲಿ ಅಮೆರಿಕ ಹಾಗೂ ಜಪಾನ್ ದೇಶಗಳನ್ನು ನಂಪುಸಕ, ಕಾಗದದ ಹುಲಿಗಳಷ್ಟೇ ಎಂದು ಹೀಯಾಳಿಸಿದೆ.

ದಕ್ಷಿಣ ಚೀನಾ ಸಮುದ್ರದ ಮೇಲಿನ ಚೀನಾ ಹಿಡಿತವನ್ನು ಫಿಲಿಪ್ಟೀನ್ಸ್, ಮಲೇಷ್ಯಾ, ತೈವಾನ್, ಬ್ರೂನೆ ಹಾಗೂ ವಿಯೆಟ್ನಾಂ ದೇಶಗಳು ವಿರೋಧಿಸುತ್ತಲೇ ಬಂದಿತ್ತು. ಈ ವಿರೋಧಕ್ಕೆ ಅಮೆರಿಕ ಹಾಗೂ ಜಪಾನ್ ರಾಷ್ಟ್ರಗಳೂ ಕೂಡ ಬೆಂಬಲ ಸೂಚಿಸಿತ್ತು.

ವಿವಾದದಲ್ಲಿ ಅಮೆರಿಕ ಹಾಗೂ ಜಪಾನ್ ರಾಷ್ಟ್ರಗಳು ಬೆಂಬಲ ಸೂಚಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಚೀನಾ ಮಾಧ್ಯಮ, ಸಮುದ್ರ ವಿವಾದಲ್ಲಿ ಇತರೆ ದೇಶಗಳು ಪ್ರಭುತ್ವ ಸಾಧಿಸುವುದನ್ನು ಚೀನಾ ಖಂಡಿಸುತ್ತದೆ ಎಂದು ಹೇಳಿದೆ.

ಅಲ್ಲದೆ, ವಿಶ್ವಸಂಸ್ಥೆ ಪೋಷಿತ ನ್ಯಾಯಾಧೀಕರಣದ ತೀರ್ಪು ಜಾರಿಗೆ ತರುವ ನಿಟ್ಟಿನಲ್ಲಿ ಅಮೆರಿಕದ ಯುದ್ಧ ನೌಕೆಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಸಮರಾಭ್ಯಾಸ ನಡೆಸಲು ಬಂದಿದ್ದೇ ಆದರೆ, ಚೀನಾ ಪಡೆ ಪ್ರತಿ ದಾಳಿ ನಡೆಸುವ ಮೂಲಕ ತಕ್ಕ ಪಾಠ ಕಲಿಸುತ್ತದೆ. ಅಮೆರಿಕಾಗೆ ಕೌಂಟರ್ ಅಟಾಕ್ ಮಾಡಲು ಚೀನಾ ಸದಾ ಕಾಲ ಸನ್ನದ್ಧವಾಗಿರಬೇಕಿದೆ ಎಂದು ಹೇಳಿಕೊಂಡಿದೆ.

ಪತ್ರಿಕೆ ಈ ಸಂಪಾದಕೀಯ ಕುರಿತಂತೆ ಪ್ರತಿಕ್ರಯೆ ನೀಡಿರುವ ಚೀನೀ ಹಿರಿಯ ನಾಯಕರೊಬ್ಬರು, ಕಾಗದದ ಹುಲಿಗಳು ಎಂಬ ಪದ ಬಳಕೆಯಿಂದ ಚಿಂತೆ ಮಾಡುವ ಅಗತ್ಯವಿಲ್ಲ. ಆದರೆ, ನಪುಂಸಕ ಪದ ಬಳಕೆ ಮಾಡಿರುವುದು ಪರಿಣಾಮ ಬೀರುವ ಸಾಧ್ಯತೆಗಳಿವೆ. ಆಟವಾಡುವವರಿಗಿಂತ ಹೊರಗಿನವರು ಹೆಚ್ಚು ಜಾಗೃತರಾಗಿತ್ತಾರೆ. ವಾಷಿಂಗ್ಟನ್ ಮತ್ತು ಟೋಕಿಯೋ ನಪುಂಸಕ ಪದವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇ ಆದರೆ, ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

Comments are closed.