ರಾಷ್ಟ್ರೀಯ

ಕಷ್ಟ ನಿವಾರಣೆಗೆ ವಿಶೇಷ ಪೂಜೆ; ಮಹಿಳೆಯನ್ನು ಕೋಣೆಗೆ ಕರೆಸಿ ಅತ್ಯಾಚಾರ: ಪೂಜಾರಿ ಬಂಧನ

Pinterest LinkedIn Tumblr

rapeಹೈದರಾಬಾದ್: ಕಷ್ಟಗಳ ನಿವಾರಣೆಗಾಗಿ ವಿಶೇಷ ಪೂಜೆ ಮಾಡುವುದಾಗಿ ಮಹಿಳೆಯೊಬ್ಬರನ್ನು ದೇವಸ್ಥಾನದ ಪಕ್ಕದಲ್ಲಿದ್ದ ಕೋಣೆಯೊಳಗೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಪೂಜಾರಿಯೊಬ್ಬನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಹೈದರಾಬಾದ್ ನ ವಿಠಲ್ವಾಡಿ ಗ್ರಾಮದಲ್ಲಿರುವ ದೇವಸ್ಥಾನದ ಪೂಜಾರಿ 26 ವರ್ಷದ ಕೆ ರಾಮಾರಾವ್ ಅಲಿಯಾಸ್ ರಾಮು ಬುಧವಾರ ದೇವಸ್ಥಾನದ ಮುಂಬಾಗ 45 ವರ್ಷದ ಮಹಿಳೆ ಅಳುತ್ತಿರುವುದನ್ನು ಗಮನಿಸಿದ್ದಾನೆ. ಈ ವೇಳೆ ಮಹಿಳೆಗೆ ತಮಗಿರುವ ಕಷ್ಟಕಾರ್ಪಣ್ಯ ನಿವಾರಣೆಗೆ ವಿಶೇಷ ಪೂಜೆ ಮಾಡುತ್ತೇನೆ. ಅದಕ್ಕಾಗಿ ಅರಿಶಿಣ ಹಾಗೂ ಐದು ನಿಂಬೆಹಣ್ಣು ತರುವಂತೆ ಹೇಳಿದ್ದಾನೆ. ಅದರಂತೆ ಪದಾರ್ಥಗಳನ್ನು ತೆಗೆದುಕೊಂಡು ಮಹಿಳೆ ಕೋಣೆಗೆ ಹೋಗಿದ್ದಾಳೆ ಈ ವೇಳೆ ಪೂಜಾರಿ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

ಅತ್ಯಾಚಾರ ಬಳಿಕ ಮಹಿಳೆ ನಾರಾಯಣ್ ಗುಡ ಪೊಲೀಸ್ ಠಾಣೆಗೆ ದೂರು ನೀಡಿದ್ದು ದೂರಿನನ್ವಯ ಪೂಜಾರಿಯನ್ನು ಬಂಧಿಸಲಾಗಿದೆ ಎಂದು ಇನ್ ಸ್ಪೆಕ್ಟರ್ ಭೀಮಾ ರೆಡ್ಡಿ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರ ಸಂತ್ರಸ್ತೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Comments are closed.