ನವದೆಹಲಿ: ಭಾರತ ಕ್ರೀಡಾ ಪ್ರಾಧಿಕಾರದ ವಿಚಿತ್ರ ಕ್ರಮವೊಂದರಲ್ಲಿ ರಿಯೊಗೆ ತೆರಳುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಕೇವಲ ಒಬ್ಬರು ದೈಹಿಕ ಚಿಕಿತ್ಸಕರು ತೆರಳಲು ಅವಕಾಶ ನೀಡಲಾಗಿದೆ. ಪ್ರಸಕ್ತ ಭಾರತ ತಂಡದ ತರಬೇತಿ ಸೆಷನ್‌ಗಳಲ್ಲಿ ಮೂವರು ದೈಹಿಕ ಚಿಕಿತ್ಸಕರು ಹಾಜರಿದ್ದಾರೆ. ಕುಮಾರ್ ಮತ್ತು ಧೀರೇಂದ್ರ ಪ್ರತಾಪ್ ಪುರುಷರ ತಂಡಕ್ಕೆ ದೈಹಿಕ ಚಿಕಿತ್ಸಕರಾಗಿದ್ದರೆ, ರುಚಾ ಕಶಾಲ್ಕರ್ ಮಹಿಳೆಯ ದೈಹಿಕ ಚಿಕಿತ್ಸಕರಾಗಿದ್ದಾರೆ.
ರಿಯೊದಲ್ಲಿ ಮಹಿಳಾ ದೈಹಿಕ ಚಿಕಿತ್ಸಕರಿದ್ದರೆ ನಮಗೆ ಹೆಚ್ಚು ಹಿತಕರವಾಗಿರುತ್ತದೆ ಎಂದು ವಿನೇಶ್ ಪೋಗಾಟ್ ಹೇಳಿದ್ದಾರೆ. ವಿನೇಶ್, ಸೋದರ ಸಂಬಂಧಿ ಬಬಿತಾ ಕುಮಾರಿ ಮತ್ತು ಸಾಕ್ಷಿ ಮಲಿಕ್ ರಿಯೊಗೆ ತೆರಳುವ ಮಹಿಳಾ ತಂಡದ ಭಾಗವಾಗಿದ್ದಾರೆ.
ಕುಸ್ತಿ ಒಕ್ಕೂಟವು ಈಗ ಎಸ್‌ಎಐ ಮತ್ತು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ಮಹಿಳಾ ದೈಹಿಕ ಚಿಕಿತ್ಸಕ ತಂಡಕ್ಕೆ ಬೇಕೆಂದು ಮನವಿ ಮಾಡಿದೆ. ಆದರೆ ಎಸ್‌ಎಐ ಮತ್ತು ಕ್ರೀಡಾ ಸಚಿವಾಲಯದಿಂದ ಯಾವುದೇ ಸಂದೇಶ ಬಂದಿಲ್ಲ.
Comments are closed.