ರಾಷ್ಟ್ರೀಯ

3ನೇ ಪತ್ನಿಯನ್ನು ಗುಂಡಿಟ್ಟು ಕೊಂದ ಟೆಕ್ಕಿ ಅರೆಸ್ಟ್

Pinterest LinkedIn Tumblr

murಪುಣೆ: ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ವೈದ್ಯೆ ಪತ್ನಿಯನ್ನು ಗುಂಡಿಟ್ಟು ಹತ್ಯೆ ಮಾಡಿದ 38 ವರ್ಷ ವಯಸ್ಸಿನ ಐಟಿ ವೃತ್ತಿಯಲ್ಲಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಹಿಂಜಾವಾಡಿ ಪ್ರದೇಶದಲ್ಲಿರುವ ಕ್ಲಿನಿಕ್‌ನಲ್ಲಿ ನಡೆದಿದೆ.

ಮನೋಜ್ ಪಟಿದಾರ್, ಕುಟುಂಬ ಕಲಹದಿಂದ ಬೇಸತ್ತು ತನ್ನ ಮೂರನೇ ಪತ್ನಿ 34 ವರ್ಷ ವಯಸ್ಸಿನ ಡಾ.ಅಂಜಲಿ ಪಟಿದಾರ್‌ರನ್ನು ದೇಶಿಯ ಪಿಸ್ತೂಲ್‌ನಿಂದ ಹತ್ಯೆ ಮಾಡಿ ಹತ್ಯೆಗೈದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಐಟಿ ಕಚೇರಿಗಳ ಕೇಂದ್ರ ಸ್ಥಾನವಾದ ಹಿಂಜವಾಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮನೋಜ್, 20 ಸಾವಿರ ರೂಪಾಯಿಗಳನ್ನು ಪಾವತಿಸಿ ದೇಶಿಯ ಪಿಸ್ತೂಲ್ ಖರೀದಿಸಿರುವ ಬಗ್ಗೆ ಮಾಹಿತಿ ಲಭಿಸಿತ್ತು ವಾಕಡ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸೆಪೆಕ್ಟರ್ ಮಹೇಂದ್ರ ಆಹೆರ್ ತಿಳಿಸಿದ್ದಾರೆ.

ಬುಧವಾರದಂದು ರಾತ್ರಿ, ತನ್ನ ಪತ್ನಿಯ ತಲೆಗೆ ಗುಂಡು ಹಾರಿಸಿ ತನ್ನ ಒಂದುವರೆ ವರ್ಷದ ಮಗುವನ್ನು ಬಿಟ್ಟು ಆರೋಪಿ ಮನೋಜ್ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರದಿಂದ ಬೇರೆ ನಗರಕ್ಕೆ ಪ್ರಯಾಣಿಸುವ ತುರಾತುರಿಯಲ್ಲಿದ್ದ ಆರೋಪಿ ಮನೋಜ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಮೊದಲಿನ ಇಬ್ಬರು ಪತ್ನಿಯರನ್ನು ಕೂಡಾ ಆರೋಪಿ ಮನೋಜ್ ಹತ್ಯೆ ಮಾಡಿರುವ ಸಾಧ್ಯತೆಗಳಿವೆ. ಇದೀಗ ಮೂರನೇ ಪತ್ನಿಯ ಹತ್ಯೆ ಕೂಡಾ ಮಾಡಿದ್ದಾನೆ. ತನಿಖಾಧಿಕಾರಿಗಳು ವಿಚಾರಣೆ ಮುಂದುವರಿಸದ್ದಾರೆ ಎನ್ನಲಾಗಿದೆ.

ಆರೋಪಿಯ ವಿರುದ್ಧ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.