ನವದೆಹಲಿ ಜು.15: ಸೀಮಿತ ಓವರ್ಗಳ ಭಾರತ ತಂಡದ ನಾಯಕ ಎಂ.ಎಸ್. ಧೋನಿ ಜತೆಗಿನ ಜಾಹೀರಾತು ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವ ಆಸ್ಪ್ರೇಲಿಯಾ ಮೂಲದ ಸ್ಪಾರ್ಟನ್ ಸ್ಪೋಟ್ಸ್ರ್ 20 ಕೋಟಿ ರು. ಮೋಸ ಮಾಡಿದೆ ಎಂದು ಪಿಟಿಐ ವರದಿ ತಿಳಿಸಿದೆ.
ಪ್ರಸಕ್ತ ಚೆನ್ನೈಯಿನ್ ಎಫ್ಸಿ (ಫುಟ್ಬಾಲ್) ಮತ್ತು ರಾಂಚಿ ರೇಸ್ (ಹಾಕಿ) ತಂಡಗಳ ಸಹಮಾಲೀಕ ಎನಿಸಿರುವ ಧೋನಿ ಪ್ರಸಕ್ತ 15 ವಿವಿಧ ಜಾಹೀರಾತು ಕಂಪೆನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಪೈಕಿ ಸ್ಪಾರ್ಟನ್ ಸ್ಪೋಟ್ಸ್ರ್ ಕಂಪೆನಿ ಕೂಡ ಒಂದು. ಬ್ಯಾಟ್ ಮತ್ತು ಪ್ರಾಯೋಜಕತ್ವಕ್ಕಾಗಿ ಮೂರು ವರ್ಷಗಳ ಹಿಂದೆ 13 ಕೋಟಿ ರು.ಗೆ ಈರ್ವರ ನಡುವೆ ಒಪ್ಪಂದವೇರ್ಪಟ್ಟಿತ್ತು. ನಾಲ್ಕು ಕಂತು ಕಟ್ಟಿದ ಕಂಪೆನಿ ಆನಂತರ ಹಣ ಪಾವತಿಸಿರಲಿಲ್ಲ. ಇದೀಗ ರಾಯಲ್ಟಿಧನ ಸೇರಿ ಅದು 20 ಕೋಟಿ ಉಳಿಸಿಕೊಂಡಿದ್ದು, ರ್ಹಿತಿ ಸ್ಪೋಟ್ಸ್ರ್ ಸ್ಪಾರ್ಟನ್ ವಿರುದ್ಧ ಕಾನೂನು ಕ್ರಮ ಜರುಗಿದೆ.
Comments are closed.